ಪುಟ:AAHVANA.pdf/೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ

ಇಷ್ಟಿದ್ದೂ ರಾಷ್ಟ್ರ ಚೇತರಿಸಿಕೊಂಡು ಅಂಬೆಗಾಲಿಡತೊಡಗಿದುದು ಘಟನಾ ವಿಶೇಷವೇ ಸರಿ, ಪ್ರಜಾಪ್ರಭುತ್ವ ತತ್ವವನ್ನು ಒಪ್ಪಿಕೊಂಡ ಭಾರತ, ತಾನು ಗಣರಾಜ್ಯವೆಂದು, ಜಾತ್ಯತೀತ ರಾಷ್ಟ್ರವೆಂದು ಸಾರಿತು. ಸ್ವಾತಂ ದಯದ ವೇಳೆಯಲ್ಲಿ ದಾರಿದ್ರ, ಅಜ್ಞಾನ, ರೋಗರುಜಿನ, ಆವ ಕಾಶಗಳ ಅಸಮಾನತೆ- ಇವುಗಳನ್ನೆಲ್ಲ ಕೊನೆಗಾಣಿಸಲು ಭಾರತೀಯರು ಪ್ರತಿಜ್ಞೆ ಕೈಗೊಳ್ಳುತ್ತಿದ್ದೇವೆ, ಎಂದರಲ್ಲವೆ ಜವಾಹರಲಾಲರು ? ಆ ಪ್ರತಿಜ್ಞೆ ಯನ್ನು ಈಡೇರಿಸುವುದಕ್ಕೋಸ್ಕರ ಪಂಚವಾರ್ಷಿಕ ಯೋಜನೆಗಳು ಸಿದ್ಧ ವಾದುವು.

ಅದು, ಕುಶಲ ಶಿಲ್ಪಿಗಳು ಕಡೆಯತೊಡಗಿದ ಆಧುನಿಕ ಭಾರತದ ಭವ್ಯ ಸೌಧ.

ಆದರೆ, ಆ ಸಮರ್ಪಣ ಭಾವದ ದುಡಿಮೆಯ ಮೇಲೆ ಆತ್ಮ ಘಾತಕವಾದ ಛಿದ್ರ ಪ್ರವೃತ್ತಿಗಳ ಕರಿನೆರಳು ಬಿದ್ದು ರಾಷ್ಟ್ರ ಕಂಗೆಡುವಂತಾಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದಾಗ ಎಲ್ಲರನ್ನೂ ಒಂದಾಗಿ ಬಿಗಿದಿದ್ದ ಬಂಧುತ್ವದ ಭಾವನೆಯ ಬದಲು, ಪರಸ್ಪರ ಮತ್ಸರ, ಅಧಿಕಾರ ಲಾಲಸೆ, ಪ್ರಾದೇಶಿಕ ಕುರುಡು ವ್ಯಾಮೋಹ, ಜಾತಿ ಮತಗಳ ಮೇಲಾಟಗಳು ತಮ್ಮ ಕುರೂಪ ಮುಖಗಳನ್ನು ತೋರಿಸಿ ವಿಕಟಾಟ್ಟಹಾಸ ಮಾಡಿದುವು.

ನವ ಭಾರತದ ಚಿತ್ರ ನಿರ್ಮಾಣವಾಗುತ್ತಿದ್ದಂತೆಯೇ ಆ ಹಸಿ ಬಣ್ಣಗಳನ್ನು ಗೆದ್ದಲು ಹುಳಗಳು ಮೇಯತೊಡಗಿದುವು.

ಈ ವಿರೋಧಾಭಾಸಕ್ಕೆ ಏನು ಕಾರಣ ?

ಜಗತ್ತಿನಲ್ಲಿ ಆಧುನಿಕ ವಿಜ್ಞಾನವೂ ತಂತ್ರಜ್ಞಾನವೂ ನಾಗಾಲೋಟದಿಂದ ಮುಂದುವರಿಯುತ್ತಿರುವಾಗ, ಬಾಹ್ಯಾಂತರಿಕ್ಷದಲ್ಲಿ ಅನ್ಯ ದೇರ್ಶೀಯರು ಏಹರಿಸುತ್ತಿರುವಾಗ, ಚಂದ್ರಗ್ರಹ ಯಾನ ಸಮಾಸವೆನಿಸಿರುವಾಗ, ಸಣ್ಣಪುಟ್ಟ ಕಾರಣಗಳಿಗಾಗಿ ಯಾದವೀ ಕಲಹಕ್ಕೆ ಸಿದ್ಧರಾಗುವ ಭಾರತೀಯ

ಪ್ರವೃತ್ತಿ ವಿಸ್ಮಯಕರವಾದದ್ದು.

೧೦