ಪುಟ:AAHVANA.pdf/೧೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ಆಹ್ವಾನ ಪ್ರಬಲರಾಗಿದ್ದರು. ಆದರೆ ವೀರಪಾಂಡ್ಯ, ಸುಂದರಪಾಂಡ್ಯ ಎಂಬ ಸೋದರ ರೊಳಗೆ ಅಧಿಕಾರಕ್ಕಾಗಿ ಕಚ್ಚಾಟ ನಡದಿತ್ತು.ಆ ಇಬ್ಬರ ನ್ಯಾಯದಿ೦ದ ಮೂರನೆಯವನಾದ ಮಲ್ಲಿಕ್ ಕಾಫರನಿಗೆ ಆದಾಯವಾಯಿತು.

   ಪೋರ್ಚುಗೀಸರು ಈ ದೇಶದ ಕಡಲದಂಡೆಯನ್ನು ತಲಪಿ ಇಲ್ಲಿ

ನೆಲೆಯೂರಲು ಬಯಸಿದ ವೇಳೆಗೆ ವಿಜಯನಗರ ಬಲಿಷ್ಠ ರಾಜ್ಯವಾಗಿತ್ತು. ಬಿಜಾಪುರದ ಅದಿಲ್ಷಾಹಿ ಅರಸರೂ ವಿಜಯನಗರದ ರಾಯರೂ ಬದ್ಧ ವೈರಿಗಳಷ್ಟೆ. ಪೋರ್ಚುಗೀಸರು ಅದಿಲ್ಶಾಹಿಗೆ ಸೇರಿದ ಗೋಮಾಂತಕ ವನ್ನು [ಗೋವೆ] ವಶಪಡಿಸಿಕೊಂಡಾಗ ಕೃಷ್ಣದೇವರಾಯ ಪೋರ್ಚುಗೀಸರ ಬೆನ್ನು ತಟ್ಟಿದ.

 ಮಂಗೋಲ್ ಪ್ರಭು ಚೆಂಘೀಸ್ಖಾನನ ವಂಶಜನಾದ ಕುಂಟ 

ತೈಮೂರನು ಹಿಂದೂಸ್ಥಾನದ ಮೇಲೆ ಅಭಿಯೋಗ ನಡಸಲು ಇಲ್ಲಿನ ಅನೈ ಕ್ಯವೇ ಕಾರಣವಾಯಿತು. ಬಾಬರನನ್ನು ಈ ದೇಶಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸಿದವನು, ಮೇವಾರದ ಸಂಗ್ರಾಮ ಸಿಂಗ್.

 ವಿಜಯನಗರದ ವಿನಾಶವನ್ನು ಬಹಮನಿ ರಾಜ್ಯಗಳ ಒಕ್ಕೂಟ 

ಸಾಧಿಸಿತು. ಆ ರಾಜ್ಯಗಳಿಗಾದರೋ ದಿಲ್ಲೀಶ್ವರ ಔರಂಗಜೇಬನು ಗೋರಿ ಕಟ್ಟಿದ. ಈ ಯುದ್ದಕ್ಕೆ ಔರ೦ಗಜೇಬನು ಸುನ್ನಿಯಾಗಿದ್ದುದೂ ಬಹಮನಿ ರಾಜ್ಯಗಳು ಷಿಯಾ ಪಂಥಾನುಯಾಯಿಗಳಾಗಿದ್ದುದೂ ಒಂದು ನೆಪ.

 ಔರಂಗಜೇಬನ ಮರಣಾನಂತರದ ಗೊಂದಲಮಯ ಪರಿಸ್ಥಿತಿಯಲ್ಲಿ 

ಪರ್ಸಿಯದ ನಾದಿರ್ ಷಾ ಈ ದೇಶದ ಮೇಲೆ ದಂಡೆತ್ತಿ ಬಂದ.

 “ಇಲ್ಲಿರುವುದನ್ನೆಲ್ಲಾ ಪೂರ್ತಿಯಾಗಿ ಝಾಡಿಸಿ ಇಡಿಯ ಸಾಮ್ರಾಜ್ಯ

ವನ್ನು ಆಕ್ರಮಿಸಿಕೊಳ್ಳಲು ಮೂವತ್ತು ಸಾವಿರ ನಂಬುಗೆಯ ಐರೋಪ್ಯ ಸೈನಿಕರಿದ್ದರೆ ಸಾಕು...." -ಇದು, ಆ ಕಾಲಾವಧಿಯಲ್ಲಿ ಹಿಂದೂಸ್ಥಾನದಲ್ಲಿದ್ದ ಮಾನುಚ್ಚಿ ಎಂಬ ಇಟಾಲಿಯನ್ ವೈದ್ಯನೊಬ್ಬ ವ್ಯಕ್ತಪಡಿಸಿದ ಅಭಿಪ್ರಾಯ.