ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ
ಭರತೇಶ್:
ನಿಜ. ನಾನೂ ಹತ್ತೂರು ಸುತ್ತಿದ್ದೇನೆ. ಭಾಷೆ ಸಾಹಿತ್ಯಗಳನ್ನು ಅಭ್ಯಾಸ
ಮಾಡ್ತಾ,ಹತ್ತಾರು ಪ್ರಾಂತಗಳಲ್ಲಿ ಕೆಲಕಾಲ ನೆಲೆಸಿದ್ದೇನೆ. ಜೀವನದಲ್ಲೂ
ಕಲೆ ಸಾಹಿತ್ಯಗಳಲ್ಲೂ ಯಾವಾಗಲೂ ನನಗೆ ಸಮಾನತೆ ಕಂಡು ಬಂದಿದೆ.
ಇತಿಹಾಸದ ಪಾಧಾಪಕ :
ಭಾರತೀಯ ಲಲಿತೆ ಕಲೆಗಳಲ್ಲಿರೋ ಸಾಮ್ಯ... అಹಿರ ಭೈರವ್,ಸಂಗೀತಕ್ಕೆ
ಸಂಬಂಧಿಸಿ ಏನಂತೀರಾ ನೀವು? ಹಿಂದೂಸ್ಥಾನೀ ಪದ್ಧತಿ-ಕರ್ನಾಟಕ
ಪದ್ಧತಿ ಇವೆರಡೂ ಬೇರೆ ಬೇರೆ ಅಲ್ವೇನು?
ಅಹಿರ ಭೈರವ್ :
ಎರಡೂ ಪರಿಪುಷ್ಟವಾಗಿ ಬೆಳೆದಿರುವ ವಿಭಿನ್ನ ಶಾಸ್ತ್ರೀಯ ಪದ್ಧತಿಗಳೇನೋ
ನಿಜ. ಆದರೂ,ಸಾಮ್ಯವಿರುವ ರಾಗಗಳು ಬೇಕಾದಷ್ಟು ಸಿಗ್ತವೆ.
ಪಂಡಿತ್ :
ಉದಾಹರಣೆಗೆ ?
ಅಹಿರ ಭೈರವ್ : ಶ್ರೀರಂಜಿನಿ_ಬಾಗೇಶ್ರೀ ; ಭೂಪ್_ಮೋಹನ್; ಯಮನ್_ ಕಲ್ಯಾಣಿ; ಪುರಿಯಾಧನಶ್ರೀ-ಕಾಮವರ್ಧಿನೀ ; ಅಹಿರ ಭೈರವ್ [ನಕ್ಕು]_ನನ್ನದೇ ಹೆಸರು ; [ಇತರ ಒಬ್ಬಿಬ್ಬರಿಂದ ಪ್ರತಿ ನಗೆ] ನನಗೆ ಸಮಾನರು_ಚಕ್ರವಾಕ್ ; ಮಾಲಕಂಸ್_ಹಿಂದೋಳ್ ; ಭಿಮ್ ಪಲಾಸಿ_ಆಭೇರಿ; ತೋಡಿ_ಭೈರವಿ ; ಜೋಗ್ _ ನಾಟ್...ಹೀಗೆ ಇನ್ನೂ ಇವೆ...
ಭರತೇಶ್: ಒಂದನ್ನೂ ಅದಕ್ಕೆ ಸರಿಯಾದ್ದನ್ನೂ ಅಂದು ತೋರಿಸಬಾರೆದ್ದೆ?
ಅಹಿರ ಭೈರವ :
[ಸಣ್ಣ ನಗು]
ಇತಿಹಾಸದ ಪ್ರಾದ್ಯಾಪಕರ ಪತ್ನಿ:
ತಗೊಳ್ಳಿ, ನಿಮ್ಮ ಕೊಳಲು.
___________
೧೬೬