ಈ ಪುಟವನ್ನು ಪ್ರಕಟಿಸಲಾಗಿದೆ
ಆಹ್ವಾನ
ಅಹಿರ ಭೈರವ್: ಯಾವುದನ್ನು ಅನ್ನಲಿ?
ಇತಿಹಾಸದ ಪ್ರಾದ್ಯಾಪಕ: ಯಾವುದಾದರೂ, ಈಗ ಒಂದು; ಉಳಿದ ದೃಷ್ಟಾಂತಗಳು ಉಪಾಹಾರ ಆದ್ಮೇಲೆ!
ಅಹಿರ ಭೈರವ್: [ಕೊಳಲಿನಿಂದ ಪ್ರಯೋಗಧ್ವನಿ ಹೊರಡಿಸಿ] ಯಮನ್. [ಯಮನ್ ರಾಗವನ್ನು ನುಡಿಸಿ ಆದ ಬಳಿಕ] ಇನ್ನು ಕಲ್ಯಾಣಿ. [ಮುಗಿಯುತ್ತಲೆ ಪ್ರಶಂಸೆಯ ಒಂದೆರಡು ಉದ್ಗಾರಗಳು; ಚಪ್ಪಾಳೆ.]
ಭರತೇಶ್: ಸಮಾನರಾಗ ದರ್ಶನ, ಶಾಸ್ತ್ರೀಯ ಸಂಗೀತಕ್ಕೆ ಇದು ನಿಜವೆಂದ ಮೇಲೆ ಜಾನಪದ ಗೀತೆಗಳಿಗೆ ಸಂಬಂಧಿಸಿ ಹೇಳಬೇಕಾದ್ದೇ ಇಲ್ಲ. ಲಾಲೀ ಪದದಿಂದ ಹಿಡಿದು ಶ್ರಮಗಾನದವರೆಗೆ ಯಾವ ಭಾಷೆಯಲ್ಲಾದರೂ ವಸ್ತು ಒಂದೇ.
ಇತಿಹಾಸದ ಪ್ರಾದ್ಯಾಪಕರ ಪತ್ನಿ: [ಉತ್ಸಾಹಿತರಾಗಿ] ಲಾಲಿಪದ ಅಂದಿರಿ. ಮೂರು ನಾಲ್ಕು ಭಾಷೆಗಳ ಜೋಗುಳದ ರೆಕಾರ್ಡ್ ಗಳು ನಮ್ಮಲ್ಲಿವೆ.
ಭರತೇಶ್: ಭೇಷ್. Why don't you play them? ಕೇಳೋಣ.
ಇತಿಹಾಸದ ಪ್ರಾದ್ಯಾಪಕರ ಪತ್ನಿ: ಹ್ಞ... ಇಲ್ಲಿದೆ. ಇದು ಬಂಗಾಳಿ. [ಬಂಗಾಳಿ ಜೋಗುಳದ ರೇಕಾರ್ಡ್ - ಸ್ವಲ್ಪ ಭಾಗ T917B] ಇದು ಮರಾಠಿ.
೧೬೭