ಪುಟ:AAHVANA.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                            ಆಹ್ವಾನ
    (ಮರಾಠೀ ಜೋಗುಳದ ರೆಕಾರ್ಡ್-ಸ್ವಲ್ಪ ಭಾಗ T190A) 
     ಗುಜರಾಥಿಯಲ್ಲಿ.
    (ಗುಜರಾಥೇ ಜೋಗುಳದ ರೆಕಾರ್ಡ್ - ಸ್ವಲ್ಪ ಭಾಗ CTB5422)
 ಭರತೇಶ್: 
     ಕೇಳಿದಿರಾ? ಭಾಷೆಗಳು ಬೇರೆ ಬೇರೆ. ವಸ್ತು ಒಂದೇ. ಪ್ರೇರಣಿಯೊಂದೇ.
 ಇತಿಹಾಸದೆ ಪ್ರಾದ್ಯಾಪಕ:
     ಜಾನಪದ ನೃತ್ಯ - ಶಾಸ್ತ್ಯೀಯ ನೃತ್ಯಗಳ ವಿಷಯದಲ್ಲೂ ಇದೇ ಮಾತು ಹೇಳ
     ಬಹುದೆ, ಚಿತ್ರಾದೇವಿ ?
 ಚಿತ್ರಾ :
     ಧಾರಾಳವಾಗಿ ಭಾರತೀಯ ಜಾನಪದ ನೃತ್ಯಗಳಲ್ಲಿ ವೈವಿಧ್ಯ ಇದ್ದೇ ಇದೆ.
     ಆದರೆ, ಸುಗ್ಗಿಯ ಕುಣಿತಏರಲಿ, ಹಬ್ಬ-ಹರಿದಿನಗಳ ನರ್ತನವಿರಲಿ, ವಸ್ತು-
     ಪ್ರೇರಣೆ ಒಂದೇ, ಶಾಸ್ತ್ರೀಯ ನೃತ್ಯಗಳಿಗೆಲ್ಲ ಭರತನ ನಾಟ್ಯಶಾಸ್ತ್ರವೇ
     ಮೌಲಿಕ ಗ್ರಂಥ, ಕಥಕ್ - ಕಥಕ್ಕಳಿ - ಮಣಿಪುರಿ...ಪ್ರತಿಯೊಂದು ಪ್ರಕಾರದ
     ಹಿಂದೆಯೂ ಶತಮಾನಗಳ ಶ್ರದ್ಧೆ ఇడి. ಭಾರತೀಯ ನೃತ್ಯ, ಇವೆಲ್ಲದರ 
     ಮೊತ್ತ.
 ಭರತೇಶ್ :
   ಶಿಲ್ಪ ಕಲೆಯ ವಿಚಾರದಲ್ಲಿ? 
 ಚಿತ್ರಾ:
   ಸದಾ ಕಾಲವೂ ಹೊಸ ಹೊಸ ಪದ್ಧತಿಗಳನ್ನು ಮೈಗೂಡಿಸಿಕೊಂಡೇ ಭಾರ
   ತೀಯ ಶಿಲ್ಪಕಲೆ ಬೆಳೆದಿದೆ. ಐದುಸಾವಿರ ವರ್ಷಗಳಿಗೂ ಹಿಂದೆ ನಮ್ಮಲ್ಲಿ
   ಶಿಲ್ಪಿಗಳಿದ್ದರು. ಮುಂದೆ ಗ್ರೀಕ್ ಶಿಲ್ಪ ನಮ್ಮದರ ಮೇಲೆ ಪ್ರಭಾವ ಬೀರಿತು.
   ಗುಪ್ತಧ ಕಾಲದಲ್ಲಿ ಪರಾಕಾಷ್ಠೆಯನ್ನು ಮುಟ್ಟಿದ ಶಿಲ್ಲಪದ್ದತಿ, ದೇಶವನ್ನೆಲ್ಲಾ
   ವ್ಯಾಪಿಸಿತು. ಪರ್ಸಿಯನ್ ವೈಖರಿಯೂ ನಮ್ಮದರೊಡನೆ ಬೆರೆಯಿತು.
   ದಕ್ಷಿಣದ ಶಿಲ್ಪ ಪದ್ಧತಿ ಹಿರಿಮೆ ಗಳಿಸಿತು.
 ಭರತೇಶ್ : 
    ವಸ್ತು - ಪ್ರೇರಣೆ ಇಲ್ಲಿಯೂ ಒಂದೇ ಅಲ್ಲವೆ?
                         ______________
                              ೧೬೮