ಈ ಪುಟವನ್ನು ಪರಿಶೀಲಿಸಲಾಗಿದೆ
ಅಹ್ವಾನ
ಚಿತ್ರಾ :
ಹ್ಞ.ವೇದೋಪನಿಷತ್ತುಗಳು,ಬುದ್ದ ಜೀವನ ಮಂದಿರ, ಮಸೀದೆ,ಗೋರಿ,
ಗುರುದ್ವಾರ-ನಿರ್ಮಾಣವೈಖರಿ ಬೇರೆ ಬೇರೆ ಎಂದು ಕಂಡರೂ ಎಲ್ಲದರಲ್ಲೂ
ಸಮಾನ ಅಂಶಗಳಿವೆ. ಬುದ್ದ, ಗೋಮಟೇಶ, ತ್ರಿಮೂರ್ತಿ-ಇವೆಲ್ಲ ಭಾರ
ತೀಯ ಶಿಲ್ಪದ ಅಮೂಲ್ಯ .ದಾಖಾಲೆ.
ಭರತೇಶ್ :
ಸ್ವಾತಂತ್ರ್ಯೋತ್ತರ ಸೃಷ್ಟಿಯಾದ ಚಂದೀಘ್ಡ್ ನಗರವನ್ನು ನೋಡಿದೇನೆ.
ಚಿತ್ರಾ:
ಪೌರಸ್ತ್ಯ - ಪಾಶ್ಚಾತ್ಯ ಪದ್ಧತಿಗಳೆರಡೂ ಅಲ್ಲಿ ಬೆರೆತಿವೆ.
ಇತಿಹಾಸದ ಪ್ರಾದ್ಯಾಪಕ:
ಆ ದೃಷ್ಟಿಯಲ್ಲಿ ನಮ್ಮ ಚಿತ್ರಕಲಾಕ್ಷೇತ್ರವೂ ಪ್ರಯೋಗಗಳ ಕರ್ಮಾಗಾರ,
ಅಲ್ಲವೆ?
ಚಿತ್ರಾ :
ನಿಜ. ಇದು ಅಪೂರ್ವ ಸಾಧನೆಗಳ ರಸಶಾಲೆಯೂ ಹೌದು. ಭಾರತೀಯ
ಚಿತ್ರಕಲೆ, ಜಾತಿ-ಮತ-ಭಾಷೆಗಳ ಎಲ್ಲೆ ಕಟ್ಟುಗಳನ್ನೆಲ್ಲ ಮುರಿದಿಕ್ಕಿ ಹಾರು ತ್ತಿರುವ ಖಗರಾಜ.
ಭರತೇಶ್:
ಸಂಗೀತಗಾರ ತಾನ್ ಸೇನ್ ಗಡ್ಡಬಿಟ್ಟುಕೊಂಡು ನವಾಬನ ಹಾಗಿರುತ್ತಿದ್ದ
ನಂತೆ !
ಪಂಡಿತ್ :
ಹೌದು. ಕವಿ ಜಗನ್ನಾಥ ಪಂಡಿತ ಶಹಜಹಾನನ ಅಂತರಂಗದ ಮಿತ್ರನಾಗಿದ್ದ.
ಇತಿಹಾಸದ ಪ್ರಾದ್ಯಾಪಕ : -
ಕವಿತೆಯ ಮಾತು ಬಂತು. “ಭಾರತೀಯ ಕಾವ್ಯ' ಅಂತ ಒಂದಿದೆ ತಾನೆ?
ಭರತೇಶ್:
ಖಂಡಿವಾಗಿ! ಬೇಕಾದರೆ ಸಂಸ್ಕೃತದ ಪ್ರಾಧಾಪಕರನ್ನು ಕೇಳಿ. ಏನ್ರಿ
ಪಂಡಿತ್ ಜ್?
_________________
೧೬೯