ಪುಟ:AAHVANA.pdf/೧೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ಆಹ್ವಾನ ಒ೦ದೇ ಸಲ ಅಲ್ಲದೇ ಹೋದರೂ ಹಂತಹಂತವಾಗಿ ಇಂಗ್ಲಿಷರು ಅದನ್ನು ಸಾಧಿಸಿದರು.

   ಅವುಧದ ಸಿರಾಜುದ್ದೌಲನನ್ನು ಉರುಳಿಸಿ ತಾನು ಪಟ್ಟವೇರಬೇಕೆಂದು 

ಮಿಾರ್ಜಾಫರ್ ಆಶಿಸಿ ಈಸ್ಟ್ ಇಂಡಿಯಾ ಕ೦ಪನಿಯ ಆಡಳಿತಗಾರ ಕ್ಲ್ವೆವ ನೊಡನೆ ಒಳಸಂಚು ನಡಸಿದುದರಿಂದ, ಆ ರಾಜ್ಯ ಸುಲಭವಾಗಿ ಇಂಗ್ಲಿಷರ ವಶಚವಾಯಿತು.

   ಹೈದರ್ ಮತ್ತು ಟೀಪೂ ಆಂಗ್ಲರ ಶಕ್ತಿಯನ್ನು ಮುರಿದಿಕ್ಕಿ ಈ ದೇಶ 

ದಿಂದ ಅವರನ್ನು ಹೊರಕ್ಕೆ ತಳ್ಳಲು ಸರ್ವಪ್ರಯತ್ನಗಳನ್ನು ಮಾಡಿದರು. ವಿದೇಶೀ ವಲಸೆಗಾರರ ವಿನಾಶಕ್ಕಾಗಿ ಇತರ ದೇಶೀಯ ಅರಸರನ್ನು ಒಗ್ಗೂಡಿಸಲು ಟೀಪೂ ಯತ್ನಿಸಿದನು. ಆದರೆ ಅವರಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸಾರ್ಥವೇ ಮುಖ್ಯವಾಗಿತ್ತು. ಮರಾಠರೂ ನಿಜಾಮನೂ ఇంగ్లిಷರಿಗೆ ನೆರ ವಾದರು. ಟೀಪೂ ಹೋರಾಡುತ್ತ ಮಡಿದನು.

  ಕಿತ್ತೂರು ಕೊಡಗುಗಳಂತಹ ಹಲವಾರು ಚಿ ಕ್ಕ ರಾ ಜ್ಯ ಗ ಳು, 

ತಮ್ಮೊಳಗಿನ ವಿಶಾಸಘಾತುಕರ ದ್ರೋಹ ಚಿಂತನೆಯ ಫಲವಾಗಿ ಆಂಗ್ಲರ ವಶವಾದುವು.

  ೧೮೫೭ ರಲ್ಲಿ ನಡದ ಸಿಪಾಯರ ದಂಗೆ ವಾಸ್ತವವಾಗಿ ಸ್ವಾತ೦ತ್ಯ್ರದ 

ಹಂಬಲಕ್ಕೆ ಭಾರತೀಯರು ನೀಡಿದ ಅಭಿವ್ಯಕ್ತಿಯಾಗಿತ್ತು. ಪ್ರತಿಭಟನೆ ನಡದಲ್ಲೆಲ್ಲ ಹಿಂದೂ ಮುಸಲ್ಮಾನರೊಂದಾಗಿ ಹೋರಾಡಿದರು. ಆದರೆ ಆ ಬಂಡಾಯ ಸಾರ್ವತ್ರಿಕವಾದ ಸಂಘಟಿತ ಸಮರವಾಗಿರಲಿಲ್ಲ. ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ತೋರಿದಂತಹ ಧೀರತೆಯ ಪಾರಮ್ಯ ಒಂದೆಡೆ ಇದ್ದರೆ, ಇನ್ನೊಂದೆಡೆ ಕೈಕಟ್ಟಿ ಕುಳಿತ ಹೇಡಿತನವಿತ್ತು. ಹೋರಾಟಗಾರರಿಗೆ ದ್ರೋಹ ಬಗೆದು ಬ್ರಿಟಿಷರಿಗೆ ನೆರವಾದ ದೃಷ್ಟಾಂತಗಳಿದ್ದುವು.

 ಹೀಗೆ ಅ೦ತರಿಕ ದೌರ್ಬಲ್ಯ, ಅನೈಕ್ಯ, ಯಾದವೀ ಕಲಹಗಳು

ಇಡಿಯ ಭಾರತವನ್ನೇ ವಿದೇಶೀಯರು ಪದಾಕ್ರಾ೦ತಗೊಳಿಸಲು ಕಾರಣ ವಾದುವು.