ವಿಷಯಕ್ಕೆ ಹೋಗು

ಪುಟ:AAHVANA.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಹ್ವಾನ

ಪಂಡಿತ್: ಈ ವಿಷಯದಲ್ಲಿ ಸಂಸ್ಕೃತದ ಕೊಡುಗೆ ಅಪಾರವಾದದ್ದೂಂತ ನನಗೆ ಸ್ವಲ್ಪ ಹೆಮ್ಮೆಯೇ!

ಇತಿಹಾಸದ ಪ್ರಾದ್ಯಾಪಕ: ಇಂಥ ಸ್ವಾಭಿಮಾನ ಕ್ಷಮ್ಯ, ಅಪ್ಪಣೆಕೊಡಿಸಿ!

ಪಂಡಿತ್: ಮಹಾಕಾವ್ಯಗಳಾದ 'ರಾಮಾಯಣ' 'ಮಹಾಭಾರತ' ಇಡೀ ದೇಶದ ಸೊತ್ತು.

ಭರತೇಶ್: ಹಿಂದಿಯ'ತುಳಸೀದಾಸ ರಾಮಾಯಾಣ',ತಮಿಳಿನ 'ಕಂಬ ರಾಮಾಯಣ' ಕನ್ನಡದ ಕುವೆಂಪು ವಿರಚಿತ 'ಶ್ರೀ ರಾಮಾಯಣ ದರ್ಶನಂ',-ಇವೆಲ್ಲ ಆ ಪ್ರಾಚೀನ ಮಹಾಕಾವ್ಯದ ಭಾರತೀಯತ್ವಕ್ಕೆ ಸಾಕ್ಷಿ.

ಪಾಂಡಿತ್: ಭಾಸನ ನಾಟಕಗಳು, ಶೂದ್ರಕನ 'ಮೃಚ್ಛಕಟಿಕ', ಕಾಳಿದಾಸನ 'ಅಭಿಜ್ಞಾನ ಶಾಕುಂತಲ', ನಿಶಾಖದತ್ತನ 'ಮುದ್ರಾರಾಕ್ಷಸ', ಭವಭೂತಿಯ 'ಮಾಲತೀ ಮಾಧವ', 'ಪಂಚತಂತ್ರದ ಕಥೆಗಳು,' 'ಹಿತೋಪದೇಶ'ದ ಕಥೆಗಳು ಇವೆಲ್ಲ ಭಾರತೀಯ ಸಾಹಿತ್ಯ.

ಭರತೇಶ್: ನಿಜ, ಭಾರತದ ಎಲ್ಲ ಭಾಷೆಗಳಲ್ಲೂ ಲಭ್ಯವಿರುವ ಸಾಹಿತ್ಯ.

ಇತಿಹಾಸದೆ ಪ್ರಾದ್ಯಾಪಕ: ಇತಿಹಾಸದ ದೃಷ್ಟಿಯಿಂದ ಮಾತ್ರ ಸಂಸ್ಕೃತವೀಗ ಜೀವಂತವಲ್ಲದ ಭಾಷೆ.

ಭರತೇಶ್: ಆದರೆ ಅದೀಗ ಬೇರೆ ರೂಪಗಳಲ್ಲಿ ಜೀವಂತವಾಗಿ ಉಳಿದಿದೆ. ಭಾರತದ ಹತ್ತು ಹದಿನಾರು ಪ್ರಮುಖ ಭಾಷೆಗಳಲ್ಲಿ ಈಗ ಅದು ಬದುಕಿದೆ. ಉತ್ತರದ ಭಾಷೆ ಗಳಿಗೂ ದ್ರಾವಿಡ ಮೂಲದ ಹೆಚ್ಚಿನ ಭಾಷೆಗಳಿಗೂ ಸಂಬಂಧ ಸಾಧ್ಯವಾಗಿ ರೋದು ಸಂಸ್ಕೃತದ ಮೂಲಕವೇ.

೧೭೦