ಆಹ್ವಾನ
ಶಾಸ್ತ್ರಿ:
ತೋರಿಕೆಗೆ ಈ ಭಾಷೆಗಳೆಲ್ಲ ಎಷ್ಟೊಂದು ಭಿನ್ನ ಭಿನ್ನವಾಗಿವೆ!
ಭರತೇಶ್:
ಆದರೆ ವಾಸ್ತವವಾಗಿ ಅವೆಲ್ಲ, ಸಾಕಷ್ಟು ಸಾಮ್ಯವಿರುವ ಒಂದೇ ನೆಲದ ಸಂತಾನ.ದೃಷ್ಟಾಂತಕ್ಕೆ ಖಡೀಬೋಲಿಯನ್ನು ತಗೊಳ್ಳೋಣ.
ಇತಿಹಾಸದ ಪ್ರಾಧಾಪಕರ ಪತ್ನಿ :
ಖಡೀಬೋಲಿ?
ಭರತೇಶ್:
ಅದೊಂದು ಭಾಷೆ ಉತ್ತರದ ಕೆಲವು ಕಡೆ ಈಗಲೂ ಹಿಂದೂ-ಮುಸಲ್ಮಾನರಾದಿಯಾಗಿ ಎಲ್ಲರೂ ಆ ಭಾಷೆಯನ್ನಾಡ್ತಾರೆ. ಪರ್ಸಿಯನ್ ಭಾಷೆ ಈ ದೇಶಕ್ಕೆ ಬಂದಾಗ, ಅದರ ಪ್ರಭಾವಕ್ಕೊಳಗಾದ ಖಡೀಬೋಲಿ ಉರ್ದೂ ವಾಯಿತು. ಸಂಸ್ಕೃತದ ಛಾಯೆಯೊಳಗೆ ಖಡೀಬೋಲಿ ಹಿಂದಿಯಾಯಿತು.
ಇತಿಹಾಸದ ಪಾಧಾಪಕರ ಪತ್ನಿ:
ಓ
ಇತಿಹಾಸದ ಪಾಧಾಪಕ :
ಈಗ ಉರ್ದು-ಹಿಂದಿಗಳ ನಡುವಿನ ಅಂತರ ಕಡಮೆಯಾಗಲೀಂತ ಹಿಂದೂ ಸ್ಥಾನೀ ಪ್ರಚಾರವಾಗ್ತಿದೆ.
ಭರತೇಶ್:
ಹೌದು. ಭಾಷೆ ಬೆಳೆಯೋದೇ ಹಾಗೆ.
ಆಚಾರ್ಯ :
ಭಾಷೆಗಳಲ್ಲಿ ಸಾಮ್ಯವಿದೆ ಎಂದಾದ ಮೇಲೆ ಸಾಹಿತ್ಯಗಳಲ್ಲೂ ಅದಿರಬೇಕಲ್ಲ?
ಭರತೇಶ್:
ಇಲ್ಲದೆ ಉಂಟೇ? ಈ ದೇಶದಲ್ಲಿ ಯಾವ ಭಾಷೆಯಲ್ಲೇ ಸಾಹಿತ್ಯ ಸೃಷ್ಟಿಯಾಗಲಿ, ಅದು ಭಾರತೀಯ ಸಾಹಿತ್ಯದ ಒಂದಂಶವೇ. ಉದಾತ್ತವಾದ
____
೧೭೧