ವಿಷಯಕ್ಕೆ ಹೋಗು

ಪುಟ:AAHVANA.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆಹ್ವಾನ

ಉನ್ನತವಾದ ಸಾಹಿತ್ಯ ಭಾರತದ ಯಾವ ಭಾಷೆಯಲ್ಲೇ ಇರಲಿ, ಅದು ಎಲ್ಲ ಭಾರತೀಯರ ಮನ್ನಣೆಗೂ ಪಾತ್ರವಾಗ್ತದೆ.

ಇತಿಹಾಸದ ಪಾಧ್ಯಾಪಕರ ಪತ್ನಿ :
ದೇಶದ ವಿವಿಧ ಭಾಷೆಗಳ ಪ್ರಾಚೀನ ಸಾಹಿತ್ಯ ಕೃತಿಗಳ ಪರಿಚಯ ಎಲ್ಲ ಜನ ರಿಗೂ ಸಾಕಷ್ಟು ಆಗಿಲ್ಲವೇನೋ.
ಭರತೇಶ್ :
ನಿಜ. ಸಾಕಷ್ಟು ఆగిల్ల. ಆಧುನಿಕ ಸಾಹಿತ್ಯಗಳಿಗೆ ಸಂಬಂಧಿಸಿ ಮಾತ್ರ, ಪರಿಸ್ಥಿತಿ ಆಶಾದಾಯಕ.

ಆಚಾರ್ಯ :
ಬಂಗಾಳಿಯಲ್ಲಿ ಬರೆದರೂ ರವೀಂದ್ರರನ್ನು ಭಾರತೀಯ ಕವಿ ಎಂದು ನಾವು ಗೌರವಿಸುತ್ತೇವೆ.

ಹೃದಯದ ಸಂವೇದನಾ ತರಂಗ ದೇಶದ ಎಲ್ಲಾ ದಂಡೆಗಳನ್ನೂ ಮುಟ್ಟೋದೇ ಅದಕ್ಕೆ ಕಾರಣ, ಬಂಕಿಮಬಾಬು ಬರೆದ 'ವಂದೇಮಾತರಂ' ಗೀತ ಭಾರತಗಾನವಾಯ್ತು. ರವೀಂದ್ರ ಕೃತಿ ರಾಷ್ಟ್ರಗೀತೆಯಾಯ್ತು. ತಮಿಳಿ ನಲ್ಲಿ ಬರೆದರೂ ಸುಬ್ರಹ್ಮಣ್ಯ ಭಾರತಿ ರಾಷ್ಟ್ರಕವಿಯಾದರು. ಮಾತೃಭೂಮಿಯನ್ನು ಕುರಿತ ರವೀಂದ್ರ ಕೃತಿಗಳಲ್ಲಿನ ಭಾವನೆಯೇ ಕವಿ ಬಾರತೀಯ ಗೀತಗಳಲ್ಲೂ ಪ್ರತಿಧ್ವನಿಸಿದೆ. ಕೇರಳದ ಮಹಾಕವಿ ವಲ್ಲತ್ತೋಳದ ಕೃತಿಗಳೆಲ್ಲಾದರೂ ಅದೇ ಸ್ಪಂದನವನ್ನು ಕಾಣ್ಥೇವೆ. ಉರ್ದೂಕವಿ ಇಕ್ಕಾಲ್ ಕೂಡಾ ಒಂದು ಕಾಲದಲ್ಲಿ ಅಂಥದೇ ಆಕಾಂಕ್ಷೆಗೆ ವಾಣಿಯಾದ ವ್ಯಕ್ತಿ.


ಇತಿಹಾಸದ ಪಾಧ್ಯಾಪಕರ :
ಭಾವ ವೈಶಾಲ್ಯವಿದ್ದರೂ ಒಮ್ಮೊಮ್ಮೆ ತನ್ನ ಬಾಷಾ ಪ್ರದೇಶದ ಬಗೆಗೇ, ಅಪಾರ ಮಮತೆ ತೋರಿಸೋದುಂಟು, ಅನಿಸ್ತದೆ.

ಭರತೇಶ್ :
ಹ್ಞ ! ಅಂಥ ಸಂದರ್ಭದಲ್ಲೂ, ಇಡಿಯ ರಾಷ್ಟ್ರದ ಅಭಿನ್ನ ಅಂಶವಾದ ತನ್ನ ನಾಡಿನ ಬಗೆಗೆ ಬರೆಯುವಾಗಲೂ, ಉದಾತ್ತ ವಿಚಾರಗಳಿಂದಲೇ ಕವಿ ಪ್ರೇರಿತ