ವಿಷಯಕ್ಕೆ ಹೋಗು

ಪುಟ:AAHVANA.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ

ನಾಗ್ತಾನೆ. ಗುಜರಾಥಿನ ರಾಷ್ಟ್ರಕವಿ ನರ್ಮದಾ ಶಂಕರ್ ಅದಕ್ಕೊಂದು ನಿದರ್ಶನ.
ಭರತೇಶ್ :
ಈ ಬಗೆಯ ಕವನಗಳನ್ನು ಮರಾಠಿ, ತೆಲುಗು, ಕನ್ನಡ, ಒರಿಯ, ಅಸಾಮಿ ಈ ಎಲ್ಲ ಭಾಷೆಗಳಲ್ಲೂ ಕಾಣಬಹುದು.
ಇತಿಹಾಸದ ಪ್ರಾಧ್ಯಾಪಕ :
ಪದ್ಯಕ್ಕೆ ಸಂಬಂಧಿಸಿದ್ದು ಭಾರತೀಯ ಗದ್ಯಕ್ಕೂ ಅನ್ವಯಿಸ್ತದೆ, ಅನ್ನಿ.
ಭರತೇಶ್ :
ಸಹಜವಾಗಿ, ದ್ವಿಜೇಂದ್ರಲಾಲ್ ರಾಯ್ ಬರೆದ ನಾಟಕಗಳನ್ನು __'ಅಹಲ್ಯಾ', 'ಮೇವಾಡದ ಪತನ', 'ಷಾಜಹಾನ್',__ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಜನ ನೋಡಿದ್ದಾರೆ. ಶರತ್ ಸಾಹಿತ್ಯ, ಸಮಗ್ರ ಭಾರತಕ್ಕೆ ವಂಗಭಾಷೆ ನೀಡಿರುವ ಕಾಣ್ಕೆ. ಆಧುನಿಕ ಭಾರತೀಯ ಕಾದಂಬರಿಗಳಲ್ಲೂ ಕೂಡ__ ಯಾವ ಭಾಷೆಯಲ್ಲೇ ಇರಲಿ__ಸಮಾನ ವಸ್ತುಗಳನ್ನೇ ಕಾಣ್ತೇವೆ. ಉದಾಹರಣೆಗೆ : ಭಾರತದ ಮೊನ್ನೆ ಮೊನ್ನೆ ವರೆಗಿನ ಪಾರತಂತ್ರ್ಯ ; ಜಡಗೊಂಡ ಸಂಪ್ರದಾಯಗಳ ವಿರುದ್ಧ ನೂತನ ವಿಚಾರಧಾರೆಗಳ ಬಂಡಾಯ....
ಇತಿಹಾಸದ ಪ್ರಾಧ್ಯಾಪಕರ ಪತ್ನಿ :
ನಮ್ಮ ಲಲಿತಕಲೆ__ಸಾಹಿತ್ಯ__-ಜನ ಜೀವನಗಳನ್ನೇ ನೂತನ ದೃಷ್ಟಿಕೋನದಿಂದ ಇವತ್ತು ನೋಡಿದ ಹಾಗಾಯಿತು !
ಪಂಡಿತ್:
'ಸಾಹಿತ್ಯ, ಸಂಗೀತ ಅಥವಾ ಕಲೆಯ ಬಗೆಗೆ ಏನೂ ತಿಳಿಯದ ಮನುಷ್ಯ, ಬಾಲವಾಗಲೀ ಕೋಡುಗಳಾಗಲೀ ಇಲ್ಲದ ಪ್ರಾಣಿಯೇ ಸರಿ!'
ಇತಿಹಾಸದ ಪ್ರಾಧ್ಯಾಪಕ :
ಹಹ್ವಾ! ಪಂಡಿತ್'ಜಿ-ಎಂಥ ಮಾತು!

______
೧೭೩