ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ
ಆಚಾರ್ಯ :
ಅದೊಂದು ನಾಣ್ಣುಡೀಂತ ಕಾಣುತ್ತೆ.
ಪಂಡಿತ್:
ಬಹಳ ಹಳೆಯದು!
ಭರತೇಶ್:
ಭಾರತೀಯ ನಾಣ್ಣುಡಿ, ಐದು ಸಹಸ್ರ ವರ್ಷಗಳ ನಾಗರಿಕತೆಯ ಇತಿಹಾಸ ವಿರುವ ಈ ದೇಶದಲ್ಲಿ, ಏಕಾರ್ಥದ ಗಾದೆಗಳು ಬೇರೆ ಬೇರೆ ಭಾಷೆಗಳಲ್ಲಿ ಅನೇಕವಿವೆ.
ಶಾಸ್ತ್ರಿ :
ಬದುಕಿನಲ್ಲೇ ಸಮಾನ ಸೂತ್ರವಿದೆ ಎಂದಮೇಲೆ, ఆ ಬದುಕಿನಿಂದ ಪ್ರೇರಿತವಾಗುವ ಸಾಹಿತ್ಯ-ಕಲೆಗಳಲ್ಲೂ ಅಂಥ ಸೂತ್ರವಿರೋದು ಸ್ವಾಭಾವಿಕ.
ಭರತೇಶ್:
ವಿವಿಧತೆಯಲ್ಲಿ ಏಕಸೂತ್ರತೆ. ಬಿಡಿ ಬಿಡಿಯಾಗಿ ಬೇರೆ ಬೇರೆ ಬಣ್ಣಗಳು, ಒಟ್ಟಿನಲ್ಲಿ ಕಾಮನ ಬಿಲ್ಲು!
[ಬಾಗಿಲಿನ ಕರೆಗಂಟೆ]
ಇತಿಹಾಸದ ಪ್ರಾಧ್ಯಾಪಕ :
[ಬಾಗಿಲ ಕಡೆ ನೋಡಿ]
ಯಾರು? ಬನ್ನಿ, ಕಾವೇರಿ__ಗಂಗಾಶರಣ್, బన్నిబన్ని! [ಉಳಿದವರೊಡನೆ] ಇದೇ ವರ್ಷ ಪದವೀಧರರಾಗಿರುವ ನನ್ನ ವಿದ್ಯಾರ್ಥಿಗಳು.
ಕಾವೇರಿ :
ನಮಸ್ತೆ ಸರ್.
ಗಂಗಾಶರಣ್ :
ಇತಿಹಾಸದ ಪ್ರಾಧ್ಯಾಪಕ :
ಕೂತ್ಕೊಳ್ಳಿ.
______
೧೭೫