ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ
ಇತಿಹಾಸದ ಪ್ರಾಧ್ಯಾಪಕ :
Splendid ! ಯಾವತ್ತು ? [ಓದಿ ] ಹುಂ. Grand!
ಪಂಡಿತ್ :
[ಪರಿಹಾಸ್ಯದ ಧ್ವನಿಯಲ್ಲಿ]
ಇತಿಹಾಸದ ಹೊಸ ಅಧ್ಯಾಯ ಓದ್ತಿರೋ ಹಾಗಿದೆ, ಪ್ರೊಫೆಸರ್!
ಇತಿಹಾಸದ ಪ್ರಾಧ್ಯಾಪಕ :
ಹೊಚ್ಚ ಹೊಸ ಅಧ್ಯಾಯ! ಸ್ನೇಹಿತರೇ! ಇವರಿಬ್ಬರೂ ಇತಿಹಾಸದ ವಿದ್ಯಾರ್ಥಿಗಳಾಗಿದ್ದಾಗ ಒಂದು ಪಾಠ ಕಲ್ತಿದ್ರು : 'ಅನೈಕ್ಯ ಗೃಹಛಿದ್ರ ತಾಂಡವವಾಡಿದಾಗಲೆಲ್ಲ ರಾಷ್ಟ್ರದ ಸ್ವಾತಂತ್ರ ನಷ್ಟವಾಗ್ರದೆ'-ಅಥವಾ__ :
ಕಾವೇರಿ:
'ಐಕ್ಯ ಸೌಹಾರ್ದ ಮನೆಮಾಡಿದಾಗಲೆಲ್ಲ___'
ಗಂಗಾಶರಣ್:
__'ರಾಷ್ಟ್ರದಲ್ಲಿ ಸುಖಶಾಂತಿ ವೃದ್ಧಿಯಾಗ್ರದೆ.'
ಇತಿಹಾಸದ ಪ್ರಾಧ್ಯಾಪಕ :
ನೋಡಿದಿರೋ ? ಆ ಪಾಠದಂತೆ ನಡೀತಿದಾರೆ ಉತ್ತರದ ಗಂಗಾಶರಣ್ ಮತ್ತು ದಕ್ಷಿಣದ ಕಾವೇರಿ.
ಪಂಡಿತ್ :
[ನೆರೆದವರ ಉದ್ಗಾರಗಳ ನಡುವೆ]
ಸಂತೋಷ ! ಶುಭಸ್ಯ ಶೀಘ್ರಂ!
ಇತಿಹಾಸದ ಪ್ರಾಧ್ಯಾಪಕರ ಪತ್ನಿ :
ಬನ್ನಿ, ಇನ್ನೆಲ್ಲರೂ ಒಳಗೆ ಬನ್ನಿ.
ಇತಿಹಾಸದ ಪ್ರಾಧ್ಯಾಪಕ :
ಏಳಿ, ಹೀಗೆ __ ಈ ಕಡೆಯಿಂದ__... ಬನ್ನಿ, ಕಾವೇರಿ-ಗಂಗಾಶರಣ್, ಮೊದಲು ಅಲ್ಪೋಪಾಹಾರ__ಆ ಮೇಲೆ ಪುಷ್ಪಹಾರ!
[Fade out]
[ಕ್ಷಣ ಮೌನ]
______
೧೭೬