ಪುಟ:AAHVANA.pdf/೧೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ಆಹ್ವಾನ

  ಮೇಲಿನ ಐತಿಹಾಸಿಕ ಘಟನೆಗಳ ಅವಲೋಕನದಿಂದ ಕಂಡು ಬರುವು

ದೇನು?

  ಗೃಹಛಿದ್ರ ಅನೈಕ್ಯ ತಾಂಡವವಾಡಿದಾಗಲೆಲ್ಲ ಭಾರತದ ಸ್ವಾತಂತ್ರ್ಯ 

ನಷ್ಟವಾಗಿದೆ.

  ಕಾಲಗಳು ಮೂರು : ಹಿಂದಿನದು, ಈಗಿನದು, ಮುಂದಿನದು. ಗತ 

ಕಾಲದ ಘಟನೆಗಳಿಂದ ವರ್ತಮಾನ ಕಾಲ ಪ್ರಭಾವಿತವಾಗಿದೆ. ಭವಿಷ್ಯ ತ್ಕಾಲದ ರೂಪು ರೇಖೆಗಳನ್ನು ಈಗಿನ ಸಂಭವಗಳೇ ಅಣಿಗೊಳಿಸುತ್ತವೆ. ನಿನ್ನೆಯ ಇತಿಹಾಸದಿಂದ ನಾವು ಕಲಿಯುವ ಪಾಠ, ಇಂದಿನ ಬದುಕನ್ನು ಹಸನುಗೊಳಿಸಲು ಪ್ರಯೋಜಕವಾಗಬೇಕು; ನಾಳೆಯ ಬದುಕನ್ನು ರೂಪಿಸಲು ನಮಗೆ ನೆರವಾಗಬೇಕು. ಆ ಪಾಠವನ್ನು ಭಾರತೀಯರು ಕಲಿತುಕೊಳ್ಳಬಲ್ಲರೆ ?

   ಕಲಿತುಕೊಳ್ಳಬಲ್ಲರು-ಎಂದು ಎದೆ ತಟ್ಟಿ ಹೇಳುವುದು ಸುಲಭವಲ್ಲ. 

ಏಕೆಂದರೆ, ಈ ದೇಶದಲ್ಲಿ ವಿವೇಕಮತಿಗಳಿರುವಂತೆಯೇ ಕಣ್ಣಿರುವ ಕುರುಡರೂ ಕಿವಿಯಿರುವ ಕಿವುಡರೂ ಇದ್ದಾರೆ. ಹಳತಿನಿಂದ ಹೊಸತಿಗೆ ಪದಾರ್ಪಣ ಮಾಡುತ್ತಿರುವ ಈ ಘಳಿಗೆಯಲ್ಲಿ ಇತಿಹಾಸದಿಂದ ಪಾಠ ಕಲಿಯದೇ ಹೋದರೆ, ಮತ್ತೆ ಎಡವಿದೆವೆಂದರೆ, ಬಾಯ್ತೆರೆದಿರುವ ಪ್ರಪಾತದೊಳಕ್ಕೆ ತಳವಿಲ್ಲದ ಆಳಕ್ಕೆ ನಾವು ಇಳಿದು ಹೋಗುತ್ತೇವೆ-ಎಂದು ನಂಬುವ ವಿಚಾರಶೀಲರು ಈ ದೇಶ ದಲ್ಲಿ ಇರುವಂತೆಯೇ, ಇತಿಹಾಸದ ಪಾಠವೆಲ್ಲ ಅರ್ಥಹೀನ-ವ್ಯರ್ಥಾಲಾಪ ಎನ್ನುವ ನಿರಸನಿಗಳೂ ಇಲ್ಲಿದ್ದಾರೆ.

  ಸ್ವಾತ೦ತ್ರ್ಯ ಪ್ರಾಪ್ತಿಯಾದೊಡನೆಯೇ ಕನಸಿನ ಕಲ್ಯಾಣರಾಜ್ಯದ 

ಸ್ಥಾಪನೆಯಾಗುವುದೆಂದು ನಂಬಿದ್ದ ಬಹುಸಂಖ್ಯಾಕ ಭಾರತೀಯರು, ದೇಶ ದಲ್ಲ್ಲಿ ಛಿದ್ರ ಪ್ರವೃತ್ತಿಗಳ ತಾಂಡವವನ್ನು ಕ೦ಡು ಭೀತರಾಗಿರುವುದು ನಿಜ. ☾aᏜ