ಸ್ಥಾಪಿತವಾಗಲಿರುವ ಬೊಕಾರೊ ಕಾರಖಾನೆ-ಇವುಗಳೆಲ್ಲ ಇಡಿಯ ಭಾರತದ ಆಸ್ತಿಯೇ ಹೊರತು ಯಾವುದೇ ಒಂದು ಪ್ರದೇಶದ್ದಲ್ಲ.
ದಾಂಡೇಲಿ [ದಂಡಕಾರಣ್ಯ], ಕಾಗದದ ಕಾರಖಾನೆಯೊಂದು ಸ್ಥಾಪಿತವಾಗಿರುವ ಊರು. ಕಾರವಾರದ ಕಾಡುಗಳ ಬಿದಿರು ಮೆಳೆಯ ಪಲ್ಪನ್ನು ಆ ಕಾರಖಾನೆ ಬಳಸುತ್ತಿದೆ. ఆ ಪಲ್ಪಿನಿಂದ ತಯಾರಾದ ಕಾಗದಕ್ಕೆ ಇಡೀ ದೇಶವೇ ಮಾರುಕಟ್ಟೆ, ಯಾವ ಭಾಷೆಯಲ್ಲಿ ಬೇಕಾದರೂ ಆ ಹಾಳೆಯ ಮೇಲೆ ಬರೆಯಬಹುದು.
ಮಾಂಗನೀಸೂ ಅಷ್ಟೆ, ಮದರಾಸೋ ಮಂಗಳೂರೋ ಕಾರವಾರವೋ ಮರ್ಮಗೋವವೋ ಯಾವ ಬಂದರದಿಂದಾದರೂ ಸರಿಯೇ, ಪರದೇಶಗಳಿಗೆ ಅದು ಪ್ರಯಾಣ ಬೆಳಸುತ್ತದೆ; ಈ ದೇಶಕ್ಕೆ ದುಡು ಗಳಿಸಿಕೊಡುತ್ತದೆ. ಒಡೆದು ಸಿದ್ಧಗೊಳಿಸುವಾಗ, ಧಕ್ಕೆಯಲ್ಲಿ ನಾವೆಗೆ ಸಾಗಿಸುವಾಗ, ಸ್ಪೃಶ್ಯರು ಅಸ್ಪೃಶ್ಯರು ಎಂಬ ಭೇದ ಆ ಆದಿರಿಗಿಲ್ಲ, ಅದರ ಸ್ಪರ್ಶಮಾತ್ರ ದಿಂದ, ದುಡಿಯುವವರೆಲ್ಲ-ಅವರು ರಜಪೂತರಿರಲಿ, ಸಿಕ್ಟರಿರಲಿ, ತಮಿಳರಿರಲಿ, ತೆಲುಗರಿರಲಿ-ಒಂದೇ ಬಣ್ಣಕ್ಕೆ ಮಾರ್ಪಡುತ್ತಾರೆ.
'ದುಡಿಮೆಯೇ ದೇವರು' ಎನ್ನುವ ಜನಕ್ಕೆ, ಭಾಷಾ ಕಲಹದ-ರಾಜ್ಯಗಳ ಜಗಳದ-ಮಹತ್ವವನ್ನು ಮನಗಾಣಿಸಿಕೊಡುವುದು ಕಷ್ಟದ ಕೆಲಸ.
ಔದ್ಯೋಗೀಕರಣದ ಹಿನ್ನೆಲೆಯಲ್ಲಿ ನಮ್ಮ ನಗರಗಳು ರೂಪುಗೊಳ್ಳುತ್ತಿರುವ ಬಗೆಯನ್ನು ನೋಡೋಣ. ಉದಾಹರಣೆಗೆ: ಬೆಂಗಳೂರು, ಕಳೆದ ಎರಡು ದಶಕಗಳಲ್ಲಿ ಬೃಹತ್ ಪ್ರಮಾಣದ ಉದ್ಯಮಗಳು ಇಲ್ಲಿ ಸ್ಥಾಪಿಸಲ್ಪಟ್ಟಿವೆ. ಹಿಂದುಸ್ಥಾನ್ ವಿಮಾನ ಕಾರ್ಖಾನೆ, ಹಿಂದೂಸ್ಥಾನ್ ಮೆಶಿನ್ ಟೂಲ್ಸ್, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್, ಭಾರತ್ ಇಲೆಕ್ಟ್ರಾನಿಕ್ಸ್ -ಹೀಗೆ ಹಲವು. ಇವೆಲ್ಲ ರಾಷ್ಟ್ರದ ಔದ್ಯೋಗಿಕ ಸಂಪತ್ತು. ಸ್ವಾಭಾವಿಕವಾಗಿಯೇ ದೇಶದ ವಿವಿಧ ಮೂಲೆಗಳ ಜನ ಇಲ್ಲಿ ನೆಲೆಸಿದ್ದಾರೆ.
ಇದು ಇವರ ನಗರಗಳಿಗೂ ಅನ್ವಯಿಸುವ ಮಾತು, ಆದರೂ,
'ಇತರ ರಾಜ್ಯಗಳ-ಭಾಷೆಗಳ-ಜನ ಇಲ್ಲಿಗೆ ಬರಬಾರದು'ಎಂಬ ಆಕ್ಷೇಪ, ಆಕ್ರೋಶ ಕೇಳಿಸುವುದುಂಟು. ಇಂಗ್ಲೆಂಡು ಕಾಮನ್ವೆಲ್ತಿನ ಸದಸ್ಯರಾಷ್ಟ್ರ