ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ
ತಮ್ಮ ಎಂಭತ್ತನೆಯ ಹುಟ್ಟು ಹಬ್ಬದ ದಿವಸ ಕವಿ ರವೀಂದ್ರರು ನೀಡಿದ ಸಂದೇಶದಲ್ಲಿ,
“ಮನುಷ್ಯನಲ್ಲಿ ನಂಬುಗೆಯನ್ನು ಕಳೆದುಕೊಳ್ಳುವ ಮಹಾ ಪಾಪವನ್ನು ನಾನು ಮಾಡಲಾರೆ. ಅದರ బದಲು అವನ ಇತಿಹಾಸ ದಲ್ಲೊಂದು ಹೊಸ ಅಧಾಯ ಆರಂಭವಾಗುವುದನ್ನು ನಾನು ಇದಿರು ನೋಡುವೆ,”
__ಎಂಬ ಒಂದು ಮಾತಿದೆ.
ఆ ಕವಿವಾಣಿಗೆ ಪಾವಿತ್ರ್ಯವನ್ನು ಕಲ್ಪಿಸಿ ಅದಕ್ಕೆ అನುಸಾರವಾಗಿ ತಮ್ಮ ವಿಚಾರಗಳನ್ನೂ ಕೃತಿಗಳನ್ನೂ ಭಾರತೀಯರು ರೂಪಿಸಿಕೊಳ್ಳಬೇಕು.
ಹಾಗೆ ಮಾಡದೇ ಹೋದೆವೆಂದರೆ ಈಗ ಹರಿಯುತ್ತಿರುವ ಬೆಳಕು ನಿರರ್ಥಕವಾದೀತು; ಅದು ಬರಿಯ ಬೆಳಗಾದೀತು.
೬
ಸ್ವತಂತ್ರ ಭಾರತದ ಬೇರೆ ಬೇರೆ ಮುಖಗಳನ್ನು ಕುರಿತು ಈವರೆಗೆ ವಿವೇಚಿಸಿದ ನಾವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅನುಪಲ್ಲವಿಗೆ ಹಿಂದಿರುಗೋಣ.
ಏಳು ಮಹಾ ನದಿಗಳ, ಏಳು ಮಹಾ ಪರ್ವತಗಳ ಈ ಬೃಹತ್ ರಾಷ್ಟ್ರದ ವೈವಿಧ್ಯಮಯ ಬದುಕಿನ ಪ್ರತೀಕ__ಸಪ್ತವರ್ಣಗಳ ಇಂದ್ರಧನುಸ್ಸು.
ನಮ್ಮ ಇತಿಹಾಸ, ತತ್ತ್ವಜ್ಞಾನ, ಸಾಮಸಾಮಾಜಿಕ ಬೆಳವಣಿಗೆ, ಸಂಗೀತ_ನ್ರುತ್ಯ_ಶಿಲ್ಪ_ಚಿತ್ರಕಲೆಗಳು,. ಭಾರತೀಯ ಭಾಷೆಗಳ ಪ್ರಾಚಿನ
ಹಾಗೂ ಆಧುನಿಕ ಸಾಹಿತ್ಯ ಸ್ರುಷ್ಟಿ ಇವೆಲ್ಲ ನಮ್ಮಲ್ಲಿನ ವಿವಿಧತೆಯೊಳಗಣ ಏಕತೆಗೆ,ಭಿನ್ನತೆಯೊಳಗಿನ ಸಮಾನತೆಗೆ, ಸಾಕ್ಷಿಗಳು....
.... ಫ್ರೆಂಚ್ ಸಾಹಿತ್ಯ_ತತ್ವಜ್ಞಾನಿ ರೊಮೆ ರೋಲಾ[ದಿವಂಗತರು]
ತಮ್ಮದೊಂದು ಗ್ರಂಥವನ್ನು,
__________
೨೨