ಪುಟ:AAHVANA.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

    “ಕೀರ್ತಿಯ  ಹಾಗೂ  ದಾಸ್ಯದ ಭೂಮಿಗೆ,  ಅಶಾಶ್ವತ ಸಾಮ್ರಾಜ್ಯ ಗಳ ಹಾಗೂ ಚಿರಂತನವಾದ ಕೀರ್ತಿಮಯ ವಿಚಾರಗಳ  ನಾಡಿಗೆ,  ಕಾಲ ವನ್ನು ಪ್ರತಿಭಟಿಸುವ ಜನತೆಗೆ, ನವಕಲ್ಪಿತ ಭಾರತಕ್ಕೆ_”
   __ಅರ್ಪಣೆ ಮಾಡಿದ್ದಾರೆ. 
   ಇಂತಹ ಪ್ರಮಾಣಪತ್ರವನ್ನು ಪಡೆದ ದೇಶ, ಮಹೋಜ್ವಲ ವಿಚಾರ ಗಳಿಗೂ ನೂತನ ಸಿದ್ದಾಂತಗಳಿಗೂ ಮಾತೃಕೆಯಾಗಿತ್ತು.  ಅರಸೊತ್ತಿಗೆಗಳು ಎದ್ದುವು, ಬಿದ್ದುವು. ಹಳಬರ ಬದಲು ಹೊಸಬರು ಆಳಿದರು. ಆದರೂ, ಮಹಾ ದಾರ್ಶನಿಕರೂ ಕವಿಗಳೂ ತಮ್ಮ ಪ್ರವಚನಗಳಿಂದ ಗೀತಗಳಿಂದ ಭಾರ ತೀಯ ಚೇತನವನ್ನು ಚಿರಂತನಗೊಳಿಸಿದರು.
    ಎಲ್ಲ ಧರ್ಮಗಳ ಸಾರವೂ ಒಂದೇ____ಎಂದು, ದಾರ್ಶನಿಕರಂತೆಯೇ

ಕವಿಗಳೂ ನುಡಿದುದುಂಟು.

      “ಧರ್ಮ ಧರ್ಮದಲ್ಲಿ ಭೇದವೆಲ್ಲಿಹುದು, ಹೇಳು ಮನವೇ 
       ಎಲ್ಲರೊಳು ಶ್ರದ್ಧೆ ಒಂದೇ ಎನಲು_"  
      _ಎಂದು ಹಾಡಿದ್ದನೆ ಕಾಶ್ಮೀರದ ಕವಿ ಹಬೀಬುಲ್ಲಾ.
      ಅದೇ ಅಭಿಪ್ರಾಯವನ್ನು ಕನ್ನಡದ ಚಾರಣ ಕವಿ ಸರ್ವಜ್ಞ,
      “ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು |                              
     ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ | 
     ನೋಡುವೆ ಎತ್ತಣದು                |ಸರ್ವಜ್ಞ|” 
     _ಎಂಬ ವಚನದಲ್ಲಿ ವ್ಯಕ್ತಪಡಿಸಿದ್ದಾನೆ.
  ಈ ಬಗೆಯ ವಿಚಾರಗಳನ್ನೂ ಭಾವನೆಗಳನ್ನೂ ಪ್ರಕಟಿಸಿದ ಕವಿತೆಗಳು ಭಾರತದ ಎಲ್ಲ ಭಾಷೆಗಳಲ್ಲೂ ದೊರೆಯುತ್ತದೆ.
  ಕಾವ್ಯ ಮತ್ತು ಜೀವನ.   ಪ್ರಾಚೀನ ಕಾಲದಿಂದ ಈವರೆಗೆ ನಾವು ಕಾಣುವ ಭಾರತೀಯ ಗ್ರಾಮದ ಚಿತ್ರ ಎಂಥದು ? ಗ್ರಾಮ ದೇವತೆಯಾದ ಹನುಮಂತ, ಹಳ್ಳಿಯ ಬಾವಿ ಅಥವಾ ಕೆರೆ, ಗಡಿಗೆ ತಿರುಗಿಸುವ ಕುಂಬಾರ
                __________
                    ೨೩