ವಿಷಯಕ್ಕೆ ಹೋಗು

ಪುಟ:AAHVANA.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ [ಈಗ ಹೆಚ್ಚೆಂದರೆ ಕಾಫಿ ಚಹಗಳ ಒಂದು ಅಂಗಡಿ]...... ಪ್ರಜಾಪ್ರಭುತ್ವ ಪದ್ಧತಿಯ ಚೌಕಟ್ಟಿನೊಳಗೆ ಗ್ರಾಮಪಂಚಾಯತಿ, ವಿಶಿಷ್ಟ ಅರ್ಥವನ್ನು ಪಡೆಯುತ್ತಿದೆಯಾದರೂ, ವಿದ್ಯುತ್ತಿನ ಪ್ರಭಾವದಿಂದ ಹಳ್ಳಿಗಳು ಹೊಸ ರೂಪ ತಳೆಯುತ್ತಿವೆಯಾದರೂ, ಎತ್ತಿನ ಬಂಡಿಯ ಯುಗದ ಬಸಿರಿನಿಂದ ಬೈಸಿಕಲ್ ಯುಗ ಮೂಡುತ್ತಿದೆಯಾದರೂ, ಈ ಪರಿವರ್ತನೆ ದೇಶದಾದ್ಯಂತ ఎల్ల ಹಳ್ಳಿ ಗಳಲ್ಲೂ ಆಗುತ್ತಿರುವುದು ಏಕಪ್ರಕಾರವಾಗಿ, ಪ್ರಾಂತಗಳ ಭಾಷೆಗಳ ವ್ಯತ್ಯಾಸ ಗಳನ್ನು ಪರಿಗಣಿಸದೆ.

     ವಿವಿಧ ಭಾಷೆ, ಸಾಹಿತ್ಯ,  ಲಲಿತಕಲೆಗಳ ಆಳವಾದ ಅಭ್ಯಾಸ ನಮಗೆ ತೋರಿಸಿಕೊಡುವುದೇನನ್ನು ?
     ಐತಿಹಾಸಿಕ ದ್ರುಷ್ಟಿಯಲ್ಲಿ ಸಂಸ್ಕ್ರುತ ನಿರ್ಜಿವ ಭಾಷೆ ಎನಿಸಿರಬಹುದು. ಆದರೆ ಅದೀಗ ಬೇರೆ ರೂಪಗಳಲ್ಲಿ ಜೀವಂತವಾಗಿ  ಉಳಿದಿದೆ. ಭಾರತದ ಹತ್ತು ಹದಿನಾರು ಭಾಷೆಗಳ ಧಮನಿಗಳಲ್ಲಿ ಸಂಸ್ಕೃತದ ರಕ್ತ ಹರಿಯುತ್ತಿದೆ ಉತ್ತರದ ಭಾಷೆಗಳಿಗೂ ದ್ರಾವಿಡ ಮೂಲದ ಹೆಚ್ಚಿನ ಭಾಷೆಗಳಿಗೂ ಸಂಸ್ಕೃತದ ಪ್ರಭಾವದಿಂದಲೇ ಸಂಬಂಧ ಸಾಧ್ಯವಾಗಿದೆ.
    ಉತ್ತರದಲ್ಲಿ ಕೆಲವು ಕಡೆ ಹಿಂದೂ ಮುಸಲ್ಮರಾದಿಯಾಗಿ ಎಲ್ಲರೂ ಆಡುವ ಭಾಷೆಯೊಂದಿದೆ : ಖಡೀ ಬೋಲಿ ಪರ್ಸಿಯನ್ ಭಾಷೆ.   ಈ ದೇಶಕ್ಕೆ ಬಂದಾಗ, ಅದರ ಛಾಯೆಯ ಕೆಳಗೆ ಖಡೀ ಬೋಲಿ ಉರ್ದೂ ವಾಯಿತು : ಸಂಸ್ಕೃತದ ಛತ್ರದ ಕೆಳಗೆ ಅದು ಹಿಂದಂಯಾಯಿತು.
    ಈಗ ಉರ್ದೂ-ಹಿಂದಿಗಳ ನಡುವಿನ ಅಂತರ ಕಡಮೆಯಾಗಲೆಂದು ಹಿಂದೂಸ್ಥಾನಿ ಪ್ರಚಾರವಾಗುತ್ತಿದೆ.
    ಸಾಹಿತ್ಯ ಕ್ರುತಿ ಈ ದೇಶದ ಯಾವ ಭಾಷೆಯಲ್ಲೇ ಸೃಷ್ಟಿಯಾಗಲಿ ಭಾರತೀಯ ಸಾಹಿತ್ಯದ ಒಂದಂಶವೇ.
    ಮಹಾಕಾವ್ಯಗಳಾದ “ರಾಮಾಯಣ”, “ಮಹಾಭಾರತ'ಗಳು ಇಡೀ ದೇಶದ ಸಾರಸ್ವತ ಸಂಪತ್ತು ಹಿಂದಿಯ “ತುಳಸೀ ರಾಮಾಯಣ', ತಮಿಳಿನ “ಕಂಬ ರಾಮಾಯಣ', ಕನ್ನಡದ ಕುವೆಂಪು ಕೃತ “ಶ್ರೀ ರಾಮಾಯಣ, ದರ್ಶನಂ”_ ಇವೆಲ್ಲ ಪ್ರಾಚೀನ ಮಹಾಕಾವ್ಯವಾದ 'ರಾಮಾಯಣ'ದ ಭಾರ
                   _______
                     ೨೪