ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ
ಬುದ್ದ ಗೋಮಟೇಶ, ತ್ರಿಮೂರ್ತಿ_ಇವೆಲ್ಲ ಭಾರತೀಯ ಶಿಲ್ಪದ ಅಮೂಲ್ಯ ದಾಖಲೆಗಳಾಗಿವೆ.
ನಾಣ್ಣುಡಿಗಳಿಗೆ ಸಂಬಂಧಿಸಿಯೂ ಅಷ್ಟೇ. ಐದು ಸಹಸ್ರ ವರ್ಷ ಗಳ ಇತಿಹಾಸವಿರುವ ದೇಶದಲ್ಲಿ ಏಕಾರ್ಥದ ಗಾದೆಗಳು ಬೇರೆ ಬೇರೆ ಭಾಷೆ ಗಳಲ್ಲೂ ಅನೇಕವಿವೆ. ಭಾರತೀಯ ಜನಜೀವನ, ಭಾಷೆ, ಸಾಹಿತ್ಯ, ಸಂಗೀತ ಮತ್ತಿತರ ಲಲಿತ ಕಲೆಗಳ ಸೂಕ್ಷ್ಮಾವಲೋಕನದಿಂದ ತಿಳಿದು ಬರುವುದು ಇಷ್ಟು : ಪ್ರತಿಯೊಂದು ಕ್ಷೇತ್ರದಲ್ಲೂ ಬಿಡಿಬಿಡಿಯಾಗಿ ಕಾಣುವ ಬೇರೆಬೇರೆ
ಬಣ್ಣಗಳು ; ಒಟ್ಟಿನಲ್ಲಿ ಕಾಮನ ಬಿಲ್ಲು.
* * * * * ಈವರೆಗಿನ ವಿವೇಚನೆ, “ಆಹ್ವಾನ” ನಾಟಕ ಮಾಲಿಕೆಯ ಆರು ಭಾಗಗಳನ್ನು ಕುರಿತದ್ದು.
ಉತ್ತೆರಾರ್ಧ ೧ “ಆಹ್ವಾನ” ನಾಟಕ ಮಾಲಿಕೆಯನ್ನು ನಾನು ಬರೆದುದು ೧೯೬೧ ರಲ್ಲಿ ; ಧಾರವಾಡದ ಆಕಾಶವಾಣಿ ಕೇಂದ್ರಕ್ಕೋಸ್ಕರ. ಆರು ಭಾಗಗಳಲ್ಲಿ ಅದು ಪ್ರಸಾರವಾಯಿತು. ಶ್ರೋತೃವರ್ಗದ ಅಪೇಕ್ಷೆಯಂತೆ ಆ ಕಾರ್ಯ ಕ್ರಮದ ಪುನಃ ಪ್ರಸಾರವೂ ನಡೆಯಿತು. ೧೯೬೨ ರಲ್ಲಿ ಬೆಂಗಳೂರು ನಿಲಯವೂ “ಆಹ್ವಾನ' ನಾಟಕಮಾಲಿಕೆಯನ್ನು ಬಿತ್ತರಿಸಿತು. ಮುಖ್ಯವಾಗಿ ರೇಡಿಯೋ ಪ್ಪಸಾರಕ್ಕೆಂದೇ ಈ ಕೃತಿಯನ್ನು ರಚಿಸಿದೆ
ನಾದರೂ ರಂಗನಾಟಕವಾಗಿಯೂ ಅದನ್ನು ಅಭಿನಯಿಸುವ ಸಾಧ್ಯತೆಯನ್ನು
_______ ೨೬