ಮನಗಂಡು, ಅಂತಹ ಪ್ರಯೋಗಕ್ಕೆ ಅಗತ್ಯವಿರುವ ಕೆಲ ನಿರ್ದೇಶಗಳೊಡನೆ, ಕೃತಿಯ ಪರಿಷ್ಕೃತ ಆವೃತ್ತಿಯೊಂದನ್ನು ಸಿದ್ಧಗೊಳಿಸಿ ವಾಚಕ ವೃಂದಕ್ಕೆ ಈಗ ಒಪ್ಪಿಸುತ್ತಿದ್ದೇನೆ.
ಸ್ವಾತಂತ್ರ್ಯಪ್ರಾಸ್ತಿಯ ಅನಂತರ ಹೆಡೆ ಎತ್ತಿದ ಛಿದ್ರ ಪ್ರವೃತ್ತಿಗಳು ಪ್ರಜಾಕೋಟಯನ್ನೂ ರಾಷ್ಟ್ರನಾಯಕರನ್ನೂ ತಲ್ಲಣಗೊಳಿಸಿದ ವರ್ಷ, ೧೯೬೧. ಭಾವೈಕ್ಯ ಸಾಧನೆಗಾಗಿ ವಿಚಾರವಂತರೆಲ್ಲ ವಿಶೇಷ ಪ್ರಯತ್ನ ಮಾಡಬೇಕೆಂಬ ಕರೆ ಕೇಳಿಸಿತು. ಈ ಸಂಬಂಧವಾಗಿ ಎಲ್ಲ ಪಕ್ಷಗಳ ಪ್ರಮುಖರ ಹಾಗೂ ಪಕ್ಷಾತೀತರಾದ ಮುಖ್ಯ ವ್ಯಕ್ತಿಗಳ ಸಮ್ಮೇಳನವೊಂದನ್ನು ಜರಗಿಸಲು ರಾಷ್ಟ್ರದ ಪ್ರಧಾನಿಯ ನಾಯಕತ್ವದಲ್ಲಿ ಸಿದ್ಧತೆ ನಡೆಯಿತು.
ಆ ವಿಷಯವನ್ನು ಕುರಿತು ಧಾರವಾಡ ಆಕಾಶವಾಣಿಯ ಮುಖ್ಯಾಧಿ ಕಾರಿ ಶ್ರೀ ಮಧುರಕಾಂತ್ ವೈದ್ಯರು ಈ ಲೇಖಕನೊಡನೆ ಪ್ರಸ್ತಾಪಿಸಿ, ಅಂದರು:
"ರಾಷ್ಟ್ರದ ಮುಂದಿರುವ ಇದೊಂದು ಬೃಹತ್ ಸಮಸ್ಯೆಗೆ ಸಂಬಂಧಿಸಿ ರೂಪಕಗಳನ್ನೋ ನಾಟಕಗಳನ್ನೋ ಬರೆದು ಕೊಡಿ."
ಮಡಿವಂತಿಕೆಗೆ ಹೆಸರಾದ ಸರಕಾರದ ಪ್ರಸಾರಾಂಗ ಬಿಚ್ಚುಮನಸ್ಸಿನ ಪೃಥಕ್ಕರಣವನ್ನು ಒಪ್ಪುವ ಬಗ್ಗೆ ಈ ಲೇಖಕ ಸಂದೇಹ ವ್ಯಕ್ತ ಪಡಿಸಿದ.
"ಯಾವುದನ್ನು ಹೇಳಬಹುದು, ಯಾವುದನ್ನು ಹೇಳಬಾರದು ಅಂತ ತೂಗಿ ಅಳೆದು ಸೃಷ್ಟ್ಯಾತ್ಮಕ ಸಾಹಿತ್ಯ ರಚಿಸುವುದು ಕಷ್ಟ, ಅಲ್ಲವೇ?"
ವೈದ್ಯರೆಂದರು:
"ಕಾಹಿಲೆ ದೊಡ್ಡದು. ಸಿಹಿಮಾತಿನ ಔಷಧೋಪಚಾರದಿಂದ ಗುಣವಾದೀತೆ? ಭಿಡೆ ದಾಕ್ಷಿಣ್ಯಗಳಿಲ್ಲದೆ ಸಂಕೋಚಪಟ್ಟುಕೊಳ್ಳದೆ ನೀವೊಂದು ಕಾರ್ಯಕ್ರಮ ಸಿದ್ಧಪಡಿಸಿ."
ಈ ಲೇಖಕನೆಂದ:
"ನೋಡೋಣ."
ಪುಟ:AAHVANA.pdf/೨೯
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ
______
೨೭