ಈ ಪುಟವನ್ನು ಪರಿಶೀಲಿಸಲಾಗಿದೆ
ಭಾರತ ಗಾಥಾ
○ ರಂಗಸ್ಥಲವನ್ನು ಎರಡು ಭಾಗಗಳಾಗಿ ವಿ೦ಗಡಿಸಬೇಕು. ಮೂರನೆಯ ಒಂದು ಭಾಗ, (ಪ್ರೇಕ್ಷಕರ) ಎಡಕ್ಕೆ; ಮೂರನೆಯ ಎರೆಡು ಭಾಗ, ಬಲಕ್ಕೆ. ಎಡದಲ್ಲಿ ಇರಬೇಕಾದವರು ನಿರೂಪಕ ಹಾಗೂ ಇತಿಹಾಸಕಾರ. ಬಲದಲ್ಲಿ ಪಾತ್ರಗಳು. ಎಡ ಭಾಗದಲ್ಲಿ ರೂಪಕದುದ್ದಕ್ಕೂ ಶುಭ್ರ ಬೆಳಕಿರುತ್ತದೆ. ನಿರೂಪಿತ ಘಟನೆ ನಡೆಯುವಾಗಲಷ್ಟೇ ಬಲಭಾಗದಲ್ಲಿ ಬೆಳಕು. ಇಲ್ಲಿ ಬೆಳಕು ಮೊದಲು ಮಸಕಾಗಿದ್ದು ಕ್ರಮೇಣ ಶುಭ್ರಗೊಳ್ಳಬೇಕು. ಘಟನೆ [ಹಾಡುಗಾರಿಕೆ, ಶ್ಲೋಕ ಪಠನ, ಘೋಷಣೆ ಅಥವಾ ನಾಟಕದ ಭಾಗ] ಮುಗಿಯುತ್ತ ಬಂದಂತೆ ಬೆಳಕು ನಿಧಾನವಾಗಿ ಮತ್ತೆ ಮಸಕುಗೊಂಡು ರಂಗಸ್ಥಲದ ಆ ಭಾಗವನ್ನು ಕತ್ತಲು ಕವಿಯಬೇಕು.
ಈ ರೂಪಕದಲ್ಲಿ ನಿರೂಪಕನೂ ಇತಿಹಾಸಕಾರನೂ ಪರಸ್ಪರ ಪೂರಕರು; ವಸ್ತು ಸ್ಥಿತಿಯ ನಿವೇದಕರು. ಘಟನೆಗಳು ನಡೆಯುವಾಗ ಯಾವ ಪ್ರತಿಕ್ರಿಯೆಯನ್ನೂ ಅವರು ವ್ಯಕ್ತಪಡಿಸುವ ಅಗತ್ಯವಿಲ್ಲ.
______
೩೩