ಪುಟ:AAHVANA.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಧಾನ ಮ೦ತ್ರಿ ಜವಾಹರಲಾಲರ ಮುನ್ನುಡಿ : “ನಾವೊಂದು ನವಭಾರತವನ್ನು ನಿರ್ಮಿಸುತ್ತಿದ್ದೇವೆ: ನೂತನ ಜಗತ್ತನ್ನು ಕಟ್ಟುತ್ತಿದ್ದೇವೆ. ಅದಕ್ಕಾದರೋ ಐಕ್ಯವು ಅತ್ಯಂತ ಮಹತ್ವದ್ದಾಗಿದೆ. ಈ ಅಂಶವನ್ನು ಮನಗಾಣಬೇಕೆಂದು ಭಾರತದ ಜನತೆಗೆ ನಾನು ವಿನಂತಿ ಮಾಡುತ್ತಿದ್ದೇನೆ. ಜನತೆಯ ಮನಸ್ಸು ಮತ್ತು ಹೃದಯಗಳ ಏಕತೆಯನ್ನು ನಾವು ಬೆಳಸಬೇಕಾಗಿದೆ. ತನ್ಮೂಲಕ ಭಾವೈಕ್ಯವನ್ನು ಸಾಧಿಸಬೇಕಾಗಿದೆ. ಈ ದಿನ ಭಾರತದಲ್ಲಿ ಅತ್ಯಂತ ಮಹತ್ತರವಾದುದು, ಶಿಸ್ತಿನ ಹಾಗೂ ಕೂಡಿ ಮನ್ನಡೆಯುವ ಏಕತೆ ಮಾತ್ರವಲ್ಲ-ಈಗ ಅತ್ಯಗತ್ಯವಾಗಿರುವುದು, ಜನತೆಯ ಮನಸ್ಸುಗಳ ಹಾಗೂ ಹೃದಯಗಳ ಐಕ್ಯ ; ಮಾನಸಿಕ ಮತ್ತು ಚೇತನದ ಐಕ್ಯ." ಮೇಳಗಾನ: "ವಂದೇ ಮಾತರಂ........ ಶ್ರೀಶಕೋಟಿಕಂಠ_ಕಲಕಲ ನಿನಾದ ಕರಾಳೆ ದ್ವಿತ್ರೀಶಕೋಟ ಭುಜೈಧೃತ ಖರ ಕರವಾಲೆ ಕೀ ಬೋಲೇ ಮಾ ತುಮಿ ಅಬಲೆ ಬಹು ಬಲ ಧಾರಿಣೀಂ ನಮಾಮಿ ತಾರಿಣೀಂ ರಿಪು ಬಲ ವಾರಿಣೀಂ ಮಾತರಂ ವಂದೇ ಮಾತರಂ........ ನಿರೂಪಕ: ಭಾರತಗಾಥಾ ! ಇದು, ಆರೇಳು ಸಾವಿರ ವರುಷಗಳ ಕಾಲಾವಧಿಯ ಮಹಾ ನಾಗರಿಕತೆಯೊಂದರ ಕಥೆ........ ಈ ಶತಮಾನದ ಆದಿಯಲ್ಲಿ ಜರ್ಮನಿಯ ವಿಖ್ಯಾತ ತತ್ವಜ್ಞಾನಿ ಕೌಂಟ್ ಹೆರ್ಮಾನ್ ಕೇಸರ್ ಲಿಂಗ್ ಭಾರತ ದರ್ಶನಕ್ಕೆಂದು ಬಂದು ರಾಮೇಶ್ವರದಲ್ಲಿಳಿದರು.