ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ
ತಪಸ್ವಿ :
ಆಲದ ಮರದ ಹಣ್ಣೊಂದನ್ನು ತಾ, ವತ್ಸ.
ಶಿಷ್ಯ:
ಇಗೋ, ತಂದೆನು,ಆರ್ಯ.
ತಪಸ್ವಿ :
ಅದನ್ನು ಭೇದಿಸು.
ಶಿಷ್ಯ:
ಭೇದಿಸಿದೆನು,ಆರ್ಯ.
ತಪಸ್ವಿ :
ಏನನ್ನು ಕಾಣುತ್ತಿರುವೆ?
ಶಿಷ್ಯ:
ಪುಟ್ಟ ಬೀಜಗಳು, ಆರ್ಯ.
ತಪಸ್ವಿ :
ಒಂದನ್ನು ಭೇದಿಸು.
ಶಿಷ್ಯ:
ಭೇದಿಸಿದೆನು ಆರ್ಯ.
ತಪಸ್ವಿ :
ಈಗ ಏನನ್ನು ಕಾಣುತ್ತಿರುವೆ ?
ಶಿಷ್ಯ:
ಏನಿಲ್ಲ,ಆರ್ಯ.
ತಪಸ್ವಿ :
ವತ್ಸ, ನಿನಗೆ ಅಗೋಚರವಾಗಿರುವುದು ಸಾರ: ಆ ಸಾರದಲ್ಲೇ ಬಲಿಷ್ಠವಾದ ಆಲದ ಮರ ಅಡಗಿದೆ. ನನ್ನನ್ನು ನಂಬು, ವತ್ಸ. ಆ ಸಾರದಲ್ಲೇ
______
೩೮