ಪುಟ:AAHVANA.pdf/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
            ಆಹ್ವಾನ
 ಆತ್ಮವಿದೆ__ಸರ್ವಸ್ವವಿದೆ. ಅದೇ ತಥ್ಯ__ಅದೇ ಆತ್ಮ. ನೀನೇ ಆ ಆತ್ಮ, 
 ಶ್ವೇತಕೇತು!

ನಿರೂಪಕ :

  ಈ ಬಗೆಯ ಚಿಂತನೆಯ ಜತೆಯಲ್ಲೇ ಯುದ್ಧ ಆಕ್ರಮಣಗಳೂ ಆಗ
   ನಡೆದುವು.

ಭಾಷ್ಹಾಮ್:

    "ಅಲ್ಲಿ ಇಲ್ಲಿ ಕ್ರೌರ್ಯ ದಬ್ಬಾಳಿಕೆಗಳು ನಿಸ್ಸಂದೇಹವಾಗಿಯೂ ಇದ್ದುವು.
    ಆದರೆ, ಆರಂಭದ ಇತರ ಸಂಸ್ಕೃತಿಗಳ ಸ್ಥಿತಿಗಳೂಡನೆ ತುಲನೆ ಮಾಡಿದಾಗ,
    ಅದು ಅಲ್ಪವೇ ಸರಿ. ಪುರಾತನ ಭಾರತೀಯ ನಾಗರಿಕತೆಯ ಆತಿ ಸ್ಫುಟ
    ವಾದ ಲಕ್ಷಣವೆಂದರೆ ಅದರ ಮಾನವೀಯತೆ."

ನಿರೂಪಕ:

    ಭಾರತಾಧ್ಯಯನದ ಪ್ರಾಧ್ಯಾಪಕ ಭಾಷ್ಹಾಮರ ಈ ಆಭಿಪ್ರಾಯ, ನಿಜಸ್ಥಿತಿಯ
    ಸ್ಪಷ್ಟೀಕರಣ.... ಮಾನವೀಯತೆಯ ಉಚ್ಚತಮ ಪ್ರತಿಪಾದಕನಾಗಿ ಪುರುಷ
    ಶ್ರೇಷ್ಠನೊಬ್ಬ ಕ್ರಿಸ್ತಪೂರ್ವ ಐದನೆಯ ಶತಮಾನದಲ್ಲಿ ಜನ್ಮ ತಳಿದ.

ಇತಿಹಾಸಕಾರ:

    ಭಗವಾನ್ ಬುದ್ಧ.  ಶಾಕ್ಯರಾಜಕುಮಾರ ಸಿದ್ಧಾರ್ಥನು ಸಕಲ ಸೌಭಾಗ್ಯ
    ಗಳನ್ನೂ ತ್ಯಜಿಸಿ, ಜಗತ್ತಿನಲ್ಲಿಯ ದುಃಖದ ಮೂಲವನ್ನರಸುತ್ತ ಹೊರಟನು.
    ಮೂವತ್ತೈದನೆಯ ವಯಸ್ಸಿನಲ್ಲಿ ಗಯೆಯ ಬಳಿ ಬೋಧಿವೃಕ್ಷದ ಕೆಳಗೆ
    ನಾಲ್ವತ್ತೊಂಭತ್ತು ದಿನ ಧ್ಯಾನಮಗ್ನನಾದ ಬಳಿಕ, ಅವನಿಗೆ ಬೋಧಿ ಲಾಭ
    ವಾಯಿತು. ಸಿದ್ಧಾರ್ಥ ಬುದ್ಧನಾದನು. ವೈಶಾಖ ಪೂರ್ಣಿಮೆಯಂದು 
    ಸಿದ್ಧಾರ್ಥನ ಜನನ. ಬೋಧಿ ಲಾಭವಾದುದೂ ವೈಶಾಖ ಪೂರ್ಣಿಮೆ
    ಯಂದೇ. ಎಂಬತ್ತನೆಯ ವಯಸ್ಸಿನಲ್ಲಿ ವೈಶಾಖ ಶುಕ್ಲ ಪೂರ್ಣಿಮೆಯ
    ದಿನವೇ ಬುದ್ಧನ ಸರಿನಿರ್ವಾಣವೂ ಆಯಿತು. ಎಲ್ಲ ಪ್ರಾಣಿಗಳಲ್ಲಿ
    ದಯೆಯನ್ನು ತೋರಬೇಕೆಂದು ಅಹಿಂಸೆಯನ್ನು ಪಾಲಿಸಬೇಕೆಂದೂ ಬುದ್ಧನು
    ಸಾರಿದನು. ವೈಯಕ್ತಿಕ ವ್ಯಾಮೋಹವೇ ದುಃಖಕ್ಕೆ ಮೂಲ . ಆ
    ವ್ಯಾಮೋಹವನ್ನು ತಡೆಗಟ್ಟುಬೇಕು---ಎಂದನು.