ಪುಟ:AAHVANA.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆವ್ಹಾನ [ಚೊಚ್ಚಲ ಹಸುಳೆಯನ್ನು ಕಳೆದುಕೊ೦ಡ ಯುವತಿ ತಾಯಿಯ ಆರ್ತಸಾದ.

     ದು8ಖದ ಅಲೆ ಮೆಲ್ಲನೆ ಆಡಗಿ ಕ್ಷಣಮೌನದ ಬಳಿಕ-]

ಬುದ್ಧ :

     ಯಾರು ನೀನು, ಮಗಳೆ ?

ಕಿಸಾಗೋತಮಿ:

    [ಬಿಕ್ಕುತ್ತ]
 ನಾನು ಕಿಸಾಗೋತಮಿ, ಭಗವನ್, ಇಗೋ, ಈ ಚೊಚ್ಚಲ ಹಸುಳೆಯನ್ನು ಕಳೆದುಕೊಂಡಿರುವ ಪಾಪಿ ! ಇದು ಉಸಿರಾಡುವಂತೆ ಮಾಡು ಭಗವನ್ !.

ಬುದ್ಧ:

  ಆಗಲಿ, ಮಗಳೆ, ಒಂದು ಚಿಟಕೆ ಬಿಳಿಯ ಸಾಸಿವೆಕಾಳು ತಾ. 

ಕಿಸಾಗೋತಮಿ:

     ತರುವೆನು ಭಗವನ್...ಆದರೆ, ಎಲ್ಲಿಂದ ತರಲಿ ? 

ಬುದ್ಧ:

   ಯಾರ ಮನೆಯಲ್ಲಿ ಈವರೆಗೆ ಮಗನಾಗಲೀ ಮಗಳಾಗಲೀ ಬೇರೆ ಯಾರೇ ಆಗಲೀ ಸತ್ತಿಲ್ಲವೋ, ಆ ಮನೆಯಿಂದ ತಾ.
                    [ಏಕನಾದದ ಶೋಕಧ್ವನಿಯ ಹಿನ್ನೆಲೆಯಲ್ಲಿ]

ಕಿಸಾಗೋತಮಿ:

ಬಿಳಿಯ ಸಾಸಿವೆಯುಂಟೆ ನಿಮ್ಮ ಮನೆಯಲ್ಲಿ?

ಹೆಂಗಸು:

     ಕೊಡಲೆ ತಂಗಿ?

ಕಿಸಾಗೋತಮಿ:

      ಇಲ್ಲಿ ಯಾರೂ ಸತ್ತುದಿಲ್ಲವಷ್ಟೆ?

ಹೆಂಗಸು:

    ಏನು ಮಾತು, ತಂಗಿ! ಬದುಕಿರುವವರು ಕಡಮೆ. ಸತ್ತವರೇ ಹೆಚ್ಚು.