ಪುಟ:AAHVANA.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆಹ್ವಾನ

                  [ನಿರಾಶೆ ಸೂಚಿಸುವ ಏಕನಾದ] 

ಕಿಸಾಗೋತಮಿ: .

   ಅಮ್ಮಾ, ಇದು ಸಾವಿಲ್ಲದ ಮನೆಯೆ? ಸಾವಿಲ್ಲದ ಮನೆಯ ಸಾಸಿವೆ ಕಾಳು ಬೇಕು ನನಗೆ.  

ಇನ್ನೊಬ್ಬಳು ಹೆಂಗಸು:

       ಎಂಥ ಮಾತು.....  ತ್ಸು---ತ್ಸು.....
                 [ಕ್ಷಣ ಮೌನ. ತೀವ್ರಗೊಳ್ಳುವ ಏಕನಾದ] 

ಕಿಸಾಗೋತಮಿ:

     ಕತ್ತಲಾಯಿತು. ಎಲ್ಲರನ್ನೂ ಕೇಳಿ ನೋಡಿದೆನಲ್ಲ! ಸಾವಿಲ್ಲದ ಮನೆಯಿಲ್ಲ-- 

ಅಂಥ ಮನೆಯೇ ಇಲ್ಲ....

        [ಅರಿವು ಮೂಡುತ್ತ] 
      ಮಗುವನ್ನು ಕಳೆದುಕೊಂಡ ತಾಯಿ ನಾನೊಬ್ಬಳೇ ಎಂದಿದ್ದೆನಲ್ಲ!.... ಎಂಥ

ಹುಚ್ಚಿ ನಾನು! ಸಾವಿಲ್ಲದ ಮನೆಯ ಸಾಸಿವೆಯ ತಾರೆಂದು ಭಗವನ್ ಅಂದುದರ ಅರ್ಥ ಈಗ ತಿಳಿಯಿತು--ಈಗ ತಿಳಿಯಿತು.... ನಿರೂಪಕ:

   ಜನಸಾಮಾನ್ಯರ ಬದುಕಿನಲ್ಲಷ್ಟೇ ಅಲ್ಲ! ರಾಷ್ಟ್ರ ಜೀವನದಲ್ಲೂ ಅರಿವು 

ಮೂಡಿಸುವ ಕಾರ್ಯವನ್ನು ಬುದ್ಧ ಕೈಕೊಂಡ. ಇತಿಹಾಸಕಾರ:

 ಒಮ್ಮೆ ಶಾಕ್ಯರು ಮತ್ತು ಕೋಲಿಯರೊಳಗಿನ ವೈರ ತೀವ್ರಗೊಂಡು ಯುದ್ಧ
 ಒದಗಿಬಂತು, ಎರಡೂ ಸೇನೆಗಳು ಕದನಕ್ಕೆಂದು ಸೂರ್ಯೋದಯವನ್ನು 
 ಇದಿರುನೋಡುತ್ತ ಎದುರುಬದುರಾಗಿ ಅಣಿ ನೆರೆದುವು.
           [ತುತೂರಿ ಮೊಳಗುತ್ತದೆ. ಭೇರಿ ಬಾರಿಸುವ ಸದ್ದು, ಶಂಖಧ್ವನಿ] 

ಶಾಕ್ಕರಾಜ :

 ಶಾಕ್ಯ  ಸೇನಾಪತಿ ! ಎಲ್ಲವೂ ಸಿದ್ಧವೆ ?