ಪುಟ:AAHVANA.pdf/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ಆಹ್ವಾನ

   [ಗುಜುಗುಜು] 
   ಅಗೋ ಸೂರ್ಯೋದಯವಾಗುತ್ತಿದೆ! ಈ ಶುಭ ಘಳಿಗೆಯಲ್ಲಿ ಪರಸ್ಪರ
   ಮಿತ್ರರಾಗಿ ಕೈಕೈ ಹಿಡಿದು ಧರ್ಮಕ್ಕೆ ಶರಣು ಬನ್ನಿ!
              [ಗುಜರಿಗುಜು]

ಶಾಕ್ಕರಾಜ : ಕೋಲಿಯಾಧಿಪ:

   ಕ್ಷಮಿಸಿ ಭಗವನ್ !

ಸೈನಿಕ ಸ್ತೋಮ:

    [ಸಾಲು ಮುರಿದು]
   ಜಯ ಜಯ ಬುದ್ಧದೇವ !

ನಿರೂಪಕ:

  ಬುದ್ಧನ ಪರಿನಿರ್ವಾಣವಾದ ಮೇಲೂ ಬುದ್ಧಮತ ಬೆಳೆಯಿತು. ದೇಶವನ್ನೆಲ್ಲಾ
ಸಂಘದ ಸೂತ್ರಗಳಿಂದ ಕಟ್ಟಿತು. ವಿದೇಶಗಳಿಗೂ ವ್ಯಾಪಿಸಿತು. ಅಸಂಖ್ಯ
ಭಿಕ್ಕುಗಳು ಎಲ್ಲೆಡೆಗಳಿಗೂ ಬುದ್ಧನ ಸಂದೇಶವನ್ನು ಹೊತ್ತು ಸಾಗಿದರು.

ಭಿಕ್ಕುಗಳು:

   "ಬುದ್ಧಂ ಶರಣಂ ಗಚ್ಛಾಮಿ
    ಧಮ್ಮಂ ಶರಣಂ ಗಚ್ಛಾಮಿ
    ಸಂಘಂ ಶರಣಂ ಗಚ್ಛಾಮಿ"

ನಿರೂಪಕ: ಬುದ್ಧನ ಸಮಕಾಲೀನನು ವರ್ಧಮಾನ ಮಹಾವೀರ. ಬುದ್ಧ ಧರ್ಮದಂತೆಯೇ ವೇದೋಪನಿಷತ್ತುಗಳಿಗಿಂತ ಭಿನ್ನವಾದ ಇನ್ನೊಂದು ಮತವನ್ನು- ಜೈನ ಮತವನ್ನು-ಈತ ಸ್ಥಾಪಿಸಿದ. ದೇಶದ ವಿವಿಧ ಭಾಗಗಳಲ್ಲಿ-- ಕಾಥೇವಾಡ, ಗುಜರಾತ್, ರಾಜಸ್ಥಾ ನ, ಕರ್ನಾಟಕ, ದಖ್ಖಣದ ಪೀಠಭೂಮಿ ಇಲ್ಲೆಲ್ಲ --- ಈ ಧರ್ಮ ಪ್ರಸಾರಗೊಂಡಿತು. ಅದು, ವಿಶ್ವವನ್ನು ಜಯಿಸ ಹೊರಟ ಅಲೆಕ್ಝಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ಕಾಲ, ಇಲ್ಲಿಂದ ಆತ