ಪುಟ:AAHVANA.pdf/೪೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

ಹಿಂತೆರಳಿದ ಬಳಿಕ ಮೌರ್ಯಸಾಮ್ರಾಜ್ಯದ ಸ್ಥಾಪನೆಯಾಯಿತು. ರಾಜಕೀಯ ವಾಗಿ ಭಾರತವನ್ನು ಒಗ್ಗೂಡಿಸಲೆತ್ನಿಸಿದ ಮೊದಲ ಸಮ್ರಾಟನೇ ಚಂದ್ರಗುಪ್ತ.

ಇತಿಹಾಸಕಾರ :

ಚಂದ್ರಗುಪ್ತನ ರಾಜಧಾನಿಯಾದ ಪಾಟಲೀಪುತ್ರದಲ್ಲಿ ಗ್ರೀಕರ ರಾಯಭಾರಿ ಯಾಗಿದ್ದ ಮೆಗಾಸ್ತನೀಸ್ ಮೌರ್ಯ ಸಾಮ್ರಾಜ್ಯವು ಸುಖ ಸಮೃದ್ಧಿಯಿಂದ ಕೂಡಿತ್ತೆಂದು ಬರೆದಿದ್ದಾನೆ, ತಕ್ಷಶಿಲೆಯ ವಿಶ್ವವಿದ್ಯಾಲಯವು ಆಗ ಪ್ರಖ್ಯಾತವಾಗಿತ್ತು.

ಕೌಟಲ್ಯ :

" ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ. ಅವರ ಕಲ್ಯಣವೇ ಅವನ ಕಲ್ಯಣ. ತನಗೆ ಇಷ್ಟವೆನಿಸಿದ್ದರಿಂದಲೇ ತನ್ನ ಒಳಿತು......ಎಂದು ಆತ ಪರಿಗಣಿಸಬಾರದು. ಬದಲು, ತನ್ನ ಪ್ರಜೆಗಳಿಗೆ ಇಷ್ಟವಾದ್ದರಿಂದಲೇ ತನ್ನ ఒళిತು......ಎಂದು ಭಾವಿಸಬೇಕು.”

ಇತಿಹಾಸಕಾರ :

ಇಂತಹ ರಾಜನೀತಿಯನ್ನೊಳಗೊಂಡ 'ಅರ್ಥಶಾಸ್ತ್ರ'ವನ್ನು ಬರೆದ ಕೌಟಲ್ಯನು ಚಂದ್ರಗುಪ್ತನ ಪ್ರಧಾನಾಮಾತ್ಯನಾಗಿದ್ದరు. ದೀಘರ್ ರಾಜ್ಯಭಾರದ ಬಳಿಕ ಚಂದ್ರಗುಪ್ತನು ಮಗನಿಗೆ ಪಟ್ಟಕಟ್ಟ, ತಾನು ಮೈಸೂರಿನ ಬಳಿಯ ಶ್ರವಣ ಬೆಳಗೊಳಕ್ಕೆ ತೆರಳಿ, ಜಿನ ಧರ್ಮದ ನಿಯಮದಂತೆ ಆಹಾರ ಪಾನೀಯ ಗಳನ್ನು ತೊರೆದು ನಿರ್ವಾಣ ಹೊಂದಿದನು.

ನಿರೂಪಕ :

ಐಕ್ಯ ಭಾರತದ ಭವ್ಯಚಿತ್ರ ಕಣ್ಣಿಗೆ ಕಟ್ಟುವುದು ಸಮ್ರಾಟ ಅಶೋಕನ ಕಾಲದಲ್ಲಿ-ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ, ಬೌದ್ಧ ವಿಹಾರ ಗಳಿಂದ, ಚೈತ್ಯಗಳಿಂದ, ಶಿಲಾಸ್ತಂಭ-ಸ್ತೂಪಗಳಿಂದ ಕಂಗೊಳಿಸುತ್ತಿದ್ದ ಅಶೋಕನ ಭಾರತ ಧರ್ಮಸಾಮ್ರಾಜ್ಯವಾಗಿತ್ತು. ಅಶೋಕ :

" ಎಲ್ಲ ಜನರೂ ನನ್ನ ಮಕ್ಕಳು....ಮುಖ್ಯವಾಗಿ ನಾನು ಬುದ್ಧಮತಕ್ಕೆ ಆಶ್ರಯವೀಯುವೆನಾದರೂ, ಉಳಿದೆಲ್ಲ ಮತಗಳನ್ನೂ ನಾನು ಪುರಸ್ಕರಿಸು

೪೪