ಪುಟ:AAHVANA.pdf/೪೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

ನಿರೂಪಕ :

ಮಹಾನ್ ವ್ಯಕ್ತಿ ಅಶೋಕನ ಮರಣದ ಅನಂತರ ಮತ್ತೆ ಗ್ರೀಕರು, ಶಕರು, ಕುಶಾಣರು, ಹೂಣರು, ಭಾರತದ ಮೇಲೆ ದಂಡೆತ್ತಿ ಬಂದರು. ಹೊರಗಿನಿಂದ ಬಂದ ಈ ಎಲ್ಲ ನದಿಗಳೂ ಭಾರತೀಯ ಜನಪದದ ಮಹಾನದಿಯಲ್ಲಿ ಲೀನ ವಾಗಿ ಹೋದುವು....ಕ್ರಿಸ್ತಶಕ ಏಳನೆಯ ಶತಮಾನದಲ್ಲಿ ಮತ್ತೋಮ್ಮೆ ಭಾರತದ ಬಹು ಭಾಗ ಒಂದೇ ಆಡಳಿತಕ್ಕೆ ಒಳಗಾಯಿತು.

ಇತಿಹಾಸಕಾರ :

ಗುಪ್ತವಂಶದ ಹರ್ಷವರ್ಧನ.

ಹ್ಯುಅನ್ ತ್ಸಾಂಗ್ :

" ಸಮ್ರಾಟ ಹರ್ಷ ಬಡಪಾಯಿ ಪ್ರಜೆಗಳ ದೂರುಗಳನ್ನು ಅಪಾರ ತಾಳ್ಮೆ ಯಿಂದ ಆಲಿಸುತ್ತಿದ್ದೆ. ಆದೂ ರಾಜಸಭಾಭವನದಲ್ಲಲ್ಲ___ಪ್ರವಾಸಿಗಳ ಬೀದಿಯಂಚಿನ ಡೇರೆಗಳಲ್ಲಿ. ಅವನು ನಿಶ್ತಾವಂತನಾದ ಸಹ್ರದಯನಾದ ಸ್ನೇಹಿತ. ತತ್ತ್ವಜ್ಞಾನವೂ ಸಾಹಿತ್ಯವೂ ಅವನಿಗೆ ಪ್ರಿಯವಾಗಿದ್ದುವು."

ಇತಿಹಾಸಕಾರ :

___ಇದು ಚೀನೀ ಯಾತ್ರಿಕ ಹ್ಯುಅನ್ ತ್ಸಾಂಗ್ ವ್ಯಕ್ತಪಡಿಸಿರುವ ಮೆಚ್ಚುಗೆ. ನಳಂದದ ವಿಶ್ವವಿದ್ಯಾಲಯವು ಆಗ ಜಗತ್ ಪ್ರಸಿದ್ದವಾಗಿತ್ತು. ದೇಶದ ನಾನಾ ಭಾಗಗಳಿಂದಲೂ ವಿದೇಶಗಳಿಂದಲೂ ಬಂದ ಹತ್ತು ಸಾವಿರ ವಿದ್ಯಾರ್ಥಿ ಗಳು ಅಲ್ಲಿ ಅಭ್ಯಸಿಸುತ್ತಿದ್ದರು. ಬುದ್ಧ ಧರ್ಮದ ಜತೆಗೆ ಹಿಂದೂ ತತ್ತ್ವ ಜ್ಞಾನ, ತರ್ಕ, ವ್ಯಕರಣ, ವೈದ್ಯ___ಈ ಎಲ್ಲ ವಿಷಯಗಳ ಬಗೆಗೆ ಪಾಠ ಪ್ರವಚನಗಳು ನಡೆಯುತ್ತಿದ್ದುವು.

ನಿರೂಪಕ :

ಕ್ರಿಸ್ತಾನಂತರದ ಕೆಲ ಶತಮಾನಗಳ ಮುಖ್ಯ ಘಟನೆಯೇ ಭಾರತೀಯ ಸಾಹಿತ್ಯದ ನಿರ್ಮಾಣ. ಭಾಸನ 'ಸ್ವಪ್ನವಾಸವದತ್ತ', ಕಾಳಿದಾಸನ 'ಶಾಕುಂತಲ', ಶೂದ್ರಕನ 'ಮೃಚ್ಛಕಟಕ', ವಿಶಾಖದತ್ತನ 'ಮುದ್ರಾರಾಕ್ಷಸ' ಭವಭೂತಿಯ 'ಮಾಲತೀ ಮಾಧವ', ಬಾಣನ 'ಕಾದಂಬರಿ' ತಮಿಳುನಾಡಿನ 'ಶಿಲಪ್ಪದಿಕಾರಂ'-ಇವು ಅಮೂಲ್ಯ ಸಾರಸ್ವತ ಸೃಷ್ಟಿ. ಭರತನ 'ನಾಟ್ಯಶಾಸ್ತ್ರ',

೪೬