ಪುಟ:AAHVANA.pdf/೪೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

ಇತಿಹಾಸಕಾರ :

ತಮಿಳುನಾಡಿನ ನಾಯನಾರರಿಂದಲೂ ಆಳ್ವಾರರಿಂದಲೂ ವಿಪುಲವಾಗಿ ಭಕ್ತಿ ಗೀತಗಳ ರಚನೆಯಾಯಿತು.

ನಿರೂಪಕ :

ಭಾರತದ ಧಾರ್ಮಿಕ ಸಾಹಿತ್ಯಕ್ಕಿದು ಅಪೂರ್ವ ಕೊಡುಗೆ. ಭಾವ ಒಂದೇ- ಭಾಷೆ ಬೇರೆ.

ಇತಿಹಾಸಕಾರ :

ಶಂಕರಾಚಾರ್ಯರ ಬಳಿಕ ರಾಮಾನುಜಾಚಾರ್ಯರು ವಿಶಿಶ್ತಾದ್ವೈತದ ಸಿದ್ದಾಂತವನ್ನು ಪ್ರತಿಪಾದಿಸಿದರು.

ನಿರೂಪಕ :

ದಕ್ಷಿಣದಿಂದ ಮೊದಲಾಗಿ ಭಾರತದಲ್ಲೆಲ್ಲಾ ಪ್ರಸಾರಗೊಂಡ ಇನ್ನೊಂದು ಸಿದ್ಧಾಂತ.

ಇತಿಹಾಸಕಾರ :

ಕರ್ನಾಟಕದಲ್ಲಿ ಮಧ್ವರು ದ್ವೈತ ಸಿದ್ದಾಂತದ ಆಚಾರ್ಯರಾದರು.

ತಾಗರಾಜ :

" ನೀ ಚಿತ್ತಮು ನಿಶ್ಚಲಮು ನಿರ್ಮಲ.... ಮನಿ ನಿನ್ನೇ ನಮ್ಮಿ ನಾನುರ........”

ನಿರೂಪಕ :

ಪುರಂದರದಾಸರ ಪದಗಳಿಂದ ಸ್ಫೂರ್ತಿಗೊಂಡು ಗಾನಚಕ್ರವರ್ತಿ ತಾಗರಾಜರು ತೆಲುಗಿನಲ್ಲಿ ರಚಿಸಿದ ಕೀರ್ತನೆಗಳು ಹೇರಳ...ಮಧ್ವಾಚಾರ್ಯರ ಸಿದ್ದಾಂತ ವಂತಾ ದೂರದ ಬಂಗಾಲದ ಗೌರಾಂಗ ಚೈತನ್ಯಪಂಥದ ಮೇಲೂ ಪ್ರಭಾವ ಬೀರಿತು.

ಇತಿಹಾಸಕಾರ : ಇದಕ್ಕೂ ಒಂದು ಶತಮಾನದ ಮುನ್ನ ಕಲ್ಯಣದ ಕ್ರಾಂತಿಯಾಯಿತು. 'ಕಾಯಕವೇ ಕೈಲಾಸ'ವೆಂಬ ತತ್ವವನ್ನು ಬೋಧಿಸಿದ ಬಸವೇಶ್ವರರು ವೀರಶೈವ ಮತದ ಸಂಸ್ಥಾಪನಾಚಾರ್ಯರಾದರು.

೪೮