ಪುಟ:AAHVANA.pdf/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


                       ಆಹ್ವಾನ 

ಬಸವೇಶ್ವರ:

         "ದಯವಿಲ್ಲದ ಧರ್ಮವಾವುದಯ್ಯ? 
         ದಯವೇ ಬೇಕು ಸಕಲ ಪ್ರಾಣಿಗಳಲ್ಲಿ, 
         ದಯವೇ ಧರ್ಮದ ಮೂಲವಯ್ಯ.
         ಕೂಡಲ ಸಂಗಮದೇವರಂತಲ್ಲದೊಲ್ಲನಯ್ಯ." 

ನಿರೂಪಕ : ಕರ್ಣಾಟಕಾಂಧ್ರಗಳಲ್ಲಿ ವೀರಶೈವ ಮತ ಪ್ರಸಾರವಾಯಿತು. ಉತ್ತರದ ರಾಜ್ಯಗಳೆಡೆಗೂ ಜಂಗಮರು ನಡೆದರು. ಇತಿಹಾಸಕಾರ : ಈ ವೇಳೆಗಾಗಲೇ ಮುಸಲ್ಮಾನರು ಭಾರತದ ಮೇಲೆ ಏರಿ ಬಂದಿದ್ದರು.ಅವರ ಧರ್ಮವೂ ಇಲ್ಲಿ ಮನೆಮಾಡಿತು. ನಿರೂಪಕ : ಇಸ್ಲಾಂ ಜ್ಞಾನ ಭಂಡಾರದೊಡನೆ ಬಂದಿತು; ಧಾರ್ಮಿಕ ಪ್ರಜಾಪ್ರಭುತ್ವದ

ಭಾವನೆಯನ್ನು ತಂದಿತು. ಭಾರತೀಯ ಸಂಗೀತ, ಶಿಲ್ಪಕಲೆ, ಚಿತ್ರಕಲೆಗೆ
ಸ್ಥಿರವಾದ ಅಮೂಲ್ಯವಾದ ಕಾಣ್ಕೆಗಳು ಮುಸಲ್ಮಾನರಿಂದ ಬಂದುವು......
ಬಡ ನೇಕಾರನೊಬ್ಬ ರಾಮರಹೀಮರಲ್ಲಿ ಏಕರೂಪವನ್ನು ಕಂಡ.

ಕಬೀರ:

            “ ಬೀತಗಯೆ ದಿನ ಭಜನ ಬಿನಾರೆ | 
             ಬಾಲ ಅವಸ್ಥಾ ಖೆಲ ಗವಾಯೊ | 
            ಜಬ ಜೋ ಬನ ತಬ ಮಾನ ಘನಾರೆ || 
             ಕಹತ ಕಬೀರ ಸುನೊ' ಭಯಿ ಸಾಧೊ | 
             ಪಾರ ಉತರಗಯೆ ಸಂತ ಜನಾರೆ ||"

ನಿರೂಪಕ : ಕಬೀರನು ಹಾಡಿದ ಆ ಹದಿನೈದು-ಹದಿನಾರನೆಯ ಶತಮಾನದಲ್ಲೇ ಗುರು ನಾನಕ್, ಹಿಂದೂಧರ್ಮ ಇಸ್ಲಾಂಗಳೆರಡರಿಂದಲೂ ಅತ್ಯುತ್ತಮವಾದ