ಪುಟ:AAHVANA.pdf/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ಆಹ್ವಾನ ಬೋಧನೆಗಳನ್ನಾರಿಸಿ,ಶಾಂತಿಯ ಸದ್ಭಾವನೆಯ ಸಂದೇಶ ಸಾರುವ ಸಿಕ್ಖ್ ಸಂಥವನ್ನು ಸ್ಥಾಪಿಸಿದ. ಸಿಕ್ಖ್ ಪ್ರಾರ್ಥನೆ:

    “........ ನಾನಕ್ ನಾಮ್ ಚಾರ್ಹದಿ ಕಲಾ
       ತೇರಿ ಭಾನೀ ಸರ್ಬತ್ಕ ಭಲಾ ”

ಸ್ತ್ರೀಕಂಠ: “ ನಾನಕನ ಹೆಸರಿಲ್ಲಿ,.ಧರ್ಮ ನೀಡುವ ನಂಬುಗೆಯಿಂದ, ದೇವರ ದಯೆಯಿಂದ, ವಿಶ್ವದ ಬಗೆಗೆ ನಮಗಿರುವುದು ಸೌಹಾರ್ದವೊಂದೇ." ನಿರೂಪಕ: ಧರ್ಮ ಸಮನ್ವಯದ ದೃಷ್ಟಿಯ ಜತೆಗೇ ರಾಜಕೀಯವಾಗಿಯೂ ಭಾರತ ದೇಶವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿಯೊಬ್ಬ, ಹದಿನಾರನೆಯ ಶತ ಮಾನದ ಮಧ್ಯದಲ್ಲಿ ದಿಲ್ಲಿಯ ಸಿಂಹಾಸನದ ಮೇಲೆ ವಿರಾಜಮಾನನಾದ. ಇತಿಹಾಸಕಾರ : ಅಕ್ಬರ್. 'ಇತಿಹಾಸದಲ್ಲಿನ ಅತಿ ಬುದ್ಧಿಶಾಲಿಗಳಾದ, ಪರವು ಮಾನವೀಯ ದೃಷ್ಟಿಯ, ಅತ್ಯಂತ ಸುಸಂಸ್ಕೃತರಾದ ಅರಸರಲ್ಲೊಬ್ಬ.' ಅಕ್ಬರ್: ಹೊಸತಾದ ವಿಶಾಲವಾದ ನಿಷ್ಪಕ್ಷಪಾತಿಯಾದ ದೃಷ್ಟಿಕೋನವೊಂದೇ, ಸಂಕುಚಿತ ಮನೋಭಾವದ ಮುರುಟು ಬಂಧನದಿಂದ ಮನುಷ್ಯನನ್ನು ಬಿಡುಗಡೆ ಮಾಡಬಲ್ಲುದೆಂದು ನಮ್ಮ ಅಭಿಪ್ರಾಯ. ಅದಕ್ಕಾಗಿ ದಿನ್-ಇ-ಇಲಾಹಿ-ದಿವ್ಯಸಂಥ...ನಮ್ಮಿಂದ ಸ್ಥಾಪನೆಯಾಗುತ್ತಿದೆ. ಎಲ್ಲ ಮತಗಳ ಸತ್ಯಗಳೂ ಇದರಲ್ಲಿ ಅಡಕವಾಗಿವೆ. ದೇವರಿಗೆ ಮನ್ನಣೆ, ಜನತೆಗೆ ಶಾಂತಿ, ಸಾಮ್ರಾಜ್ಯಕ್ಕೆ ಭದ್ರತೆ-ಇವೇ ಈ ಪಂಥದ ಸೂತ್ರಗಳಾಗಿವೆ. ನಾವು ಸುಲ್-ಇ-ಕುಲ್-- ವಿಶ್ವಶಾಂತಿ-ಯನ್ನೂ ಬಯಸುತ್ತೇವೆ. ಇತಿಹಾಸಕಾರ: ಈ ಪಂಥ ದೇಶವನ್ನೆಲ್ಲಾ ಆವರಿಸುವ 'ನಾಳೆ'ಯ ಕನಸನ್ನು ಅಕ್ಬ್ ರನು ಕಂಡನು.ಹಿಂದೂಗಳ ಮೇಲಿನ ಜೆಜಿಯಾ ತೆರಿಗೆಯನ್ನು ಅವನು ತೆಗೆದು