ಪುಟ:AAHVANA.pdf/೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ಆಹ್ವಾನ ಹಾಕಿನನು. ಸೈನಿಕರಿಂದ ಕೊಲೆ ಸುಲಿಗೆಗಳಾಗದಂತೆ ಕಟ್ಟಪ್ಪಣೆ ವಿಧಿಸಿದನು. ಅವನ ಸೇನೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ರಜಪೂತರೇ ಇದ್ದರು. ಬೀರಬಲ್,ತೋಡರಮಲ್,ಮಾನ್ಸಿಂಗ್ ರಂತಹ ಆಪ್ತಕೋಟಿಯಿದ್ದ ಅಕ್ಬರನು ಇಂಡಿಯ ದೇಶವನ್ನು ಸಂಪದ್ಭರಿತವನ್ನಾಗಿ ಮಾಡಿದನು. ನಿರೂಪಕ: ಹೊಸ ರಾಷ್ಟ್ರವನ್ನು ಕಟ್ಟಿದ ಛತ್ರಪತಿ ಶಿವಾಜಿಗಾದರೂ ದೇಶದ ಐಕ್ಯವೇ ತಾರಕ ಮಂತ್ರವಾಗಿತ್ತು. ಇತಿಹಾಸಕಾರ: ಪೋರ್ಚುಗೀಸರು, ಡಚ್ಚರು, ಬ್ರಿಟಿಷರು, ಜೈನರು, ಫ್ರೆಂಚರು ಭಾರತದಲ್ಲಿ ಪದಾರ್ಪಣ ಮಾಡಿದರು. Jesus Christ : “Father, forgive them, for they know not what they do.” ನಿರೂಪಕ: ಕ್ರಿಸ್ತನುಡಿ. ಒಂದನೆಯ ಶತಮಾನದಲ್ಲೇ ಸಂತ ಥಾಮಸ್ ಯೇಸುವಿನ ಸಂದೇಶದೊಡನೆ ದಕ್ಷಿಣ ಭಾರತಕ್ಕೆ ಬಂದ. ಮಾನವೀಯತೆಯ ಆಗರವಾದ ಕ್ರಿಸ್ತಧರ್ಮ, ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಂತೂ ಭಾರತದ ಎಲ್ಲೆಡೆಗಳಲ್ಲಿ ಬೇರುಬಿಟ್ಟಿತು. ಇತಿಹಾಸಕಾರ : ಹತ್ತೊಂಭತ್ತನೆಯ ಶತಮಾನದ ಅಂತ್ಯದವೇಳೆಗೆ ಇಂಡಿಯ ಭಾರತವೇ ಬ್ರಿಟಿಷರಿಗೆ ಶರಣಾಗತವಾಯಿತು. ನಿರೂಪಕ: ಇಂಡಿಯಾವಾಗಿ ಮಾರ್ಪಟ್ಟ ಹಿಂದೂಸ್ಥಾನ, ಅರ್ಥಾತ್ ಭಾರತ, ಬಂಧನ ದಲ್ಲಿ ಒಂದಾಯಿತು. ಆಧುನಿಕ ಯುಗದ ಕ್ರಾಂತಿಕಾರಕ ವಿಚಾರಗಳು ಭರತ ಭೂಮಿಯ ಮಡಿಲನ್ನು ತುಂಬಿದುವು.