ಪುಟ:AAHVANA.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ ಇತಿಹಾಸಕಾರ: ರಾಮಮೋಹನ ರಾಯ್, ದಯಾನಂದ ಸರಸ್ವತಿಯರಂಥ ವಿಚಾರವೇತ್ತರು, ಸಾಮಾಜಿಕ ಕ್ಷೇತ್ರದಲ್ಲಿ ತೀವ್ರ ಸುಧಾರಣೆಯ ಶಂಖಧ್ವನಿಯನ್ನು ಮೊಳ ಗಿದರು. ಬ್ರಹ್ಮೋ ಸಮಾಜ, ಆರ್ಯ ಸಮಾಜಗಳು ಭಾರತದಾದ್ಯಂತ ಜನ ಜೀವನದ ಮೇಲೆ ಪ್ರಭಾವ ಬೀರಿದುವು. ನಿರೂಪಕ : ಸ್ವಾತಂತ್ರ್ಯದ ಪ್ರಜಾಪ್ರಭುತ್ವದ ಕಲ್ಪನೆಗಳು ಈ ಮಣ್ಣಲ್ಲಿ ಮತ್ತೊಮ್ಮೆ ಮೊಳೆತು ಅದಮ್ಯನಾಗಿ ಬೆಳದುವು. ಇತಿಹಾಸಕಾರ : ಅಹಿಂಸೆಯ ಸತ್ಯಾಗ್ರಹದ ಸಂದೇಶವನ್ನು ಬೀರಿದ ಮೋಹನದಾಸ ಕರಮ ಚಂದ ಗಾಂಧಿ, ಅಖಿಲಭಾರತದ ಅನಭಿಷಿಕ್ತ ರಾಜನಾದರು. ಗಾಂಧಿಜಿ : " ಸಂಬಂಧಿಕರು ಹಾಗೂ ಅಪರಿಚಿತರ ನಡುವೆ, ಬಿಳಿಯರು ಹಾಗೂ ಕರಿಯರ ನಡುವೆ, ಹಿಂದೂಗಳು ಹಾಗೂ ಇತರ ಧರ್ಮಗಳ ಭಾರತೀಯರಾದ ಮುಸಲ್ಮಾನರು-ಪಾರಸೀಕರು-ಕ್ರಿಶ್ಚಿಯನ್ನರು ಇಲ್ಲವೆ ಯೆಹೂದಿಯರ ನಡುವೆ, ಯಾವ ತಾರತಮ್ಯವನ್ನೂ ನಾನು ತೋರಿದವನಲ್ಲ, ಅಂತಹ ತಾರ ತಮ್ಯಗಳನ್ನು ಮಾಡಲು ನನ್ನ ಹೃದಯ ಅಸಮರ್ಥವಾಗಿದೆಯೆಂದೇ ನಾನು ಹೇಳಬಹುದು. ನಿರೂಪಕ: ಭಾರತೀಯ ಸಂಸ್ಕೃತಿಯ ಮಹಾಸಾಗರದ ಅಲೆಯೇ ಮಹಾತ್ಮರ ಈ ಸರ್ವ ಸೋದರತಾಭಾವ. ಅಷ್ಟೇ ಅಮೂಲ್ಯವಾದುದು ರವೀಂದ್ರರ ಕವಿವಾಣಿ. ರವೀಂದ್ರನಾಥ ಠಾಕೂರ್: " ಭಾರತದ ಮೇಲಿನ ನನ್ನ ಪ್ರೀತಿಗೆ ಕಾರಣ- ಭೂಗೋಳದ ಆರಾಧನೆಯ ಹವ್ಯಾಸವಲ್ಲ; ಈ ಮಣ್ಣಿನಲ್ಲಿ ಹುಟ್ಟುವ ಅವಕಾಶ ನನಗೆ ದೊರೆಯಿತೆಂಬುದೂ ಅಲ್ಲ. ತನ್ನ ಮಹಾಪುತ್ರರ ದಿವ್ಯ ಪ್ರಜ್ಞೆಯಿಂದ ಉದಿಸಿದ ಸತ್ಯಂ,ಜ್ಞಾನಂ, ಶಿವಂ, ಅದ್ವೈತಂ ಎಂಬ ಜೀವಂತ ಪದಗಳನ್ನು ಪ್ರಕ್ಷುಬ್ಧ