ಪುಟ:AAHVANA.pdf/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


           ಆಹ್ವಾನ

ಸತ್ಯಾನ್ವೇಷಕ: [ವ್ಯಥೆಯಿಂದ]

ಗತಕಾಲದ ತಥ್ಯ ಮಿಥ್ಯಗಳನ್ನು ಬೆನ್ನಟ್ಟಿ ನಾನು ಬಳಲಿದ್ದೇನೆ. [ಅಸಹನೆ

ತೋರುತ್ತ] ಇವತ್ತಿನ ಸ್ಥಿತಿ ಏನು? ನಾಳೆಯ ಗತಿ ಏನು? ಎಂಬ ಶಂಕೆ- ಸಂದೇಹಗಳಿಂದ ಬಾಧಿತನಾಗಿದ್ದೇನೆ. ನನ್ನ ದೇಶದ ನಿಜಸ್ಥಿತಿಯನ್ನಿಷ್ಟು ಚಿತ್ರಿಸಪ್ಪ ಮಹಾನುಭಾವ. ಅದರ ರೂಪವನ್ನಿಷ್ಟು ಬಣ್ಣಿಸಪ್ಪ. ವಿಶ್ವಮಾನವ : ಇನ್ನು ಸ್ವಲ್ಪಹೊತ್ತು ನಿಮ್ಮ ದೇಶದ ಮೇಲೆಯೇ ನನ್ನ ವಿಹಾರ, ನೀಲಿ ನೀರಿನಿಂದಲೂ ಬಿಳಿಯ ಪರ್ವತಾವಳಿಯಿಂದಲೂ ಆವೃತವಾಗಿರುವ ಈ ಭೂಭಾಗ ಎಷ್ಟು ಮನೋಹರ ! ಸತ್ಯಾನ್ವೇಷಕ: ಒಲ್ಲೆ, ಕೇಳಲಾರೆ! ಕವಿ ಕಲ್ಪನೆಯ ಚಾತುರ್ಯವನ್ನು ಬಿಟ್ಟು ಬಿಡು! ವಸ್ತು ಸ್ಥಿತಿ ಏನೂಂತ ಒಣ ಮಾತಿನಲ್ಲಿ ಹೇಳು. ವಿಶ್ವಮಾನವ : ಮರಳು ಭೂಮಿಯಲ್ಲೂ ನಂದನವನ್ನು ನಿರ್ಮಿಸಬಲ್ಲ ಕುಶಲರನ್ನು ಕುರಿತು ಒಣ ಮಾತಿನಲ್ಲಿ ಹೇಳಲೆ? ಸತ್ಯಾನ್ವೇಷಕ: ನನಗೆ ಕಟುಸತ್ಯ ಬೇಕು. ವಿಶ್ವಮಾನವ : ನಾನು ಕಾಣುತ್ತಿರುವುದು ಸ್ವತಂತ್ರ ಭಾರತವನ್ನು, ಹದಿನೈದು ವರ್ಷಗಳಿಗೆ ಹಿಂದೆ ಈ ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾದದ್ದು ನರ್ವಿವಾದದ ಸತ್ಯ ಸಂಗತಿ. Jawaharlal Nehru :

[ಧ್ವನಿಮುದ್ರಿಕೆಯಿಂದ]
“At the stroke of the mid-night hour, when the world sleeps India will awake to life and