ಪುಟ:AAHVANA.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆಹ್ವಾನ ಅದುಮಿ ಹಿಡಿಯಲ್ಪಟ್ಟ ರಾಷ್ಟ್ರವೊಂದರ ಆತ್ಮ ನುಡಿಯತೊಡಗುತ್ತದೆ. ಈ ಗಂಭೀರ ಘಳಿಗೆಯಲ್ಲಿ, ಭಾರತದ ಹಾಗೂ ಆಕೆಯ ಜನತೆಯ ಸೇವೆಗಾಗಿಯೂ ಇನ್ನೂ ಹಿರಿದಾದ ಮಾನವಕೋಟಿಯ ಒಳ್ಳಿತಿಗಾಗಿಯೂ ಸಮರ್ಪಣ ಭಾವದಿಂದ ಪ್ರತಿಙ್ಞೆ, ಕೈಕೊಳ್ಳುವುದು ನ್ಯಾಯೋಚಿತವಾಗಿದೆ.” [ಕ್ಷಣ ತಡೆದು]

"ನಮ್ಮ ಮುಂದಿರುವುದು ಸುಖಜೀವನದ ಅಥವಾ ವಿಶ್ರಾಂತಿಯ ಭವಿಷ್ಯತ್ತಲ್ಲ, ಅದು ನಾವೆಷ್ಟೋ ಬಾರಿ ಸ್ವೀಕರಿಸುತ್ತ ಬಂದಿರುವ ಪ್ರತಿಜ್ಞೆಗಳೂ ಈ ದಿನ ಸ್ವೀಕರಿಸಲಿರುವ  ಪ್ರತಿಙ್ಞೆಯೂ ಈಡೇರುವುದು ಸಾಧ್ಯವಾಗುವಂತೆ ನಾವು ನಡಸಬೇಕಾಗಿರುವ ಅವ್ಯಾಹತ ಹೋರಾಟದ  ಭವಿಷ್ಯತ್ತು.ಭಾರತದ ಸೇವೆ ಎಂದರೆ,ಸಂಕಟಪಡುತ್ತಿರುವ ಕೋಟ್ಯಂತರ ಜನರ ಸೇವೆ ಎಂದರ್ಥ; ದಾರಿದ್ರ್ಯ, ಅಜ್ಞಾನ,  ರೋಗರುಜಿನ, ಅವಕಾಶಗಳ ಅಸಮಾನತೆ-ಇವುಗಳನ್ನೆಲ್ಲಾ ಕೊನೆಗಾಣಿಸುವುದು ಎಂದರ್ಥ.” 

ವಿಶ್ವಮಾನವ : ಸ್ವತಂತ್ರ ಭಾರತದಲ್ಲಿ, ಅನೇಕ ಭಾಷೆಗಳ ಅನೇಕ ಬುಡಕಟ್ಟಗಳ ಜನರೆಲ್ಲರ ಸಾಮೂಹಿಕ ಶ್ರೆಯಸ್ಸಿಗಾಗಿ ರಾಷ್ಟ್ರ ನಿರ್ಮಾಣ ಕಾರ್ಯ ನಡೆದಿದೆ. ನಿರೂಪಕ: ವಿಶ್ವಮಾನವನ ಈ ವರದಿ, ಭಾರತಯಾತ್ರೆಯನ್ನು ಕೈಗೊಂಡ ಪತ್ರಿಕಾ ಪ್ರಪಂಚದ ಪ್ರೇಷಿತ ಪ್ರತಿನಿಧಿಗಳ ವರದಿಗಳಿಗಿಂತ ಭಿನ್ನವಲ್ಲ. ಪುರುಷ ಪತ್ರಿಕೋದ್ಯೋಗಿ: ಆರ್ಥಿಕ ಅಭಿವೃದ್ಧಿಗೆ ಔದ್ಯೋಗಿಕ ಬೆಳವಣಿಗೆಯೇ ತಳಹದಿ, ಆ ಬೆಳವಣಿಗೆಗೆ ಉಕ್ಕು ಮುಖ್ಯ. ಭಿಲಾಯಿ, ರೂರ್ ಕೆಲಾ, ದುರ್ಗಾಪುರಗಳ ಉಕ್ಕಿನ ಕಾರಖಾನೆಗಳು ಹೊಸ ಆರ್ಥಿಕ ವ್ಯವಸ್ಥೆಗೆ ಅಡಿಪಾಯವಾಗಿವೆ. ಸ್ತ್ರೀ ಪತ್ರಿಕೋದ್ಯೋಗಿ: ಮದರಾಸಿನ ಸಮೀಪದ ಗಾಂಧೀಗ್ರಾಮದಲ್ಲಿ ಗ್ರಾಮೋದ್ಯೋಗ,ಸಾಮಾಜಿಕ ಶಿಕ್ಷಣ, ಶಿಶು ಸಂಗೋಪನ ಮತ್ತಿತರ ಕ್ಷೇತ್ರಗಳಲ್ಲಿ ಸಹಸ್ರಾರು ಜನ ಶಿಕ್ಷಿತರಾಗುತ್ತಿದ್ದಾರೆ.