ವಿಷಯಕ್ಕೆ ಹೋಗು

ಪುಟ:AAHVANA.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಹ್ವಾನ

ಸ್ತ್ರೀ ಪತ್ರಿಕೋದ್ಯೋಗಿ:

ಬೆಂಗಳೂರಿನಲ್ಲಿರುವ ಭಾರತ ಎಲೆಕ್ಟ್ರಾನಿಕ್ಸ್, ಸೂಕ್ಷ್ಮತಮ ವಿದ್ಯುತ್ ಉಪಕರಣಗಳನ್ನು ತಯಾರಿಸುತ್ತಿದೆ.

ಸ್ತ್ರೀ ಪತ್ರಿಕೋದ್ಯೋಗಿ :

ಮೆಷಿನ್ ಗಳಿಗೆ ಜನ್ಮನೀಡುವ ತಾಯಿಮೆಷಿನ್ ಗಳು, ಹಿಂದೂಸ್ಥಾನ್ ಮೆಷಿನ್ ಟೂಲ್ಸ್ ಕಾರಖಾನೆಯಲ್ಲಿ ನಿರ್ಮಾಣವಾಗುತ್ತಿವೆ.

ನಿರೂಪಕ :

ಕೃಷಿ ವ್ಯವಸಾಯವೇ ಜೀವನಾಡಿ ಎಂದು ಪರಿಗಣಿತವಾದ ರಾಷ್ಟ್ರದಲ್ಲಿ, ಔದ್ಯೋಗಿಕ ಕ್ರಾಂತಿ, ಜತೆಯಲ್ಲೆ, ಆ ನಾಡಿಯ ಬಡಿತದ ಬಗೆಗೂ ತೀವ್ರ ಗಮನ.

ಸ್ತ್ರೀ ಪತ್ರಿಕೋದ್ಯೋಗಿ:

ಸಿಂದ್ರಿಯಲ್ಲಿ ರಾಸಾಯನಿಕ ಗೊಬ್ಬರದ ಕಾರಖಾನೆ ಇದೆ. ಗ್ರಾಮಾಂತರ ಪ್ರದೇಶಗಳ ಸ್ವರೂಪವನ್ನು ಬದಲಾಯಿಸುವ ಕಾರ್ಯಕರ್ತರು ಹೈದರಾಬಾದಿನ ಬಳಿಯ ಹಿಮಾಯತ್ ಸಾಗರದಲ್ಲಿ ಸಿದ್ಧವಾಗುತ್ತಿದ್ದಾರೆ. ಸಮಾಜ ವಿಕಾಸ ಯೋಜನೆಗಳು ಹಳ್ಳಿಗಾಡುಗಳನ್ನು ಆವರಿಸುತ್ತಿವೆ.

ಪುರುಷ ಪತ್ರಿಕೋದ್ಯೋಗಿ

ರಾಷ್ಟ್ರೀಯ ಹೆದ್ದಾರಿಗಳ, ಜಲಮಾರ್ಗಗಳ, ನೌಕಾತಾಣಗಳ ರಚನೆಯಾಗುತ್ತಿದೆ. ಒಣಗಿದ ನೆಲಕ್ಕೆ, ಬಂಜರು ಭೂಮಿಗೆ, ನೀರುಣಿಸುವ ಯೋಜನೆಗಳು ಕರಗತವಾಗಿವೆ. ಎಂತಹ ಅಣೆಕಟ್ಟಗಳು! ವಾಯವ್ಯದ ಭಾಕ್ರಾನಂಗಲ್, ಈಶಾನ್ಯದ ಹಿರಾಕುಡ್, ದಕ್ಷಿಣದ ತುಂಗಭದ್ರಾ, ಪಶ್ಚಿಮದ ಕೊಯಿನಾ-ಶರಾವತಿ....

'ನಿರೂಪಕ :

ನೀರಿಗಷ್ಟೇ ಅಲ್ಲ, ವಿದ್ಯುದುತ್ಪಾದನೆಗೂ ಇಲ್ಲಿ ಏರ್ಪಾಟಿದೆ.

ಸ್ತ್ರೀ ಪತ್ರಿಕೋದ್ಯೋಗಿ:

ಮನೆ-ಮನೆಗೂ ಬೆಳಕು.

————

೬೪