ಈ ಪುಟವನ್ನು ಪ್ರಕಟಿಸಲಾಗಿದೆ
ಆಹ್ವಾನ
ತಾಯಿ :
[ಒಳಗಿನಿಂದ] ಇದೇನು ಅರವಟ್ಟಿಗೆಮನೆ ಕೆಟ್ಟೋಯ್ತೇ! [ಗೊಣಗುತ್ತ] ಯಾವ ಜಾತೀನೋ ಏನೋ........(ಗಟ್ಟಿಯಾಗಿ)ತಂಬಿಗೇಲಿ ಕೊಡ್ಬೇಡ.ಮೇಲಿಂದ ಅಂಗೈಗೆ ಸುರಿ.
ಶಾಸ್ತ್ರಿ:
ನೋಡಿದಿರಾ ಇವನ ಸೊಕ್ಕು!ಬಾವಿ ಮುಟ್ದ ಅಂದೆ !ಹಿಡೀರಿ ! ಕಟ್ಟಾಕಿ! ಸುಲೀರಿ ಚಕ್ಕಳ !
ಒಬ್ಬ:
ಕಲಿಗಾಲ!ಕಲಿಗಾಲ! ಪರಜಾತಿಯವನನ್ನು ಕಟ್ಕೊಂಡು ಆ ಹುಡುಗಿ ಓಡೋದ್ಲು!
ಇನ್ನೊಬ್ಬ :
What a calamity!
ರಾಜಕಾರಣಿ :
ನನ್ನ ಕೋಮಿಗೆ ಅನ್ಯಾಯವಾಗಿದೆ! ನಮ್ಮ ಜಾತಿಯ ಹುಡುಗರಿಗೆ ಶಾಲೆ ಕಾಲೇಜುಗಳಲ್ಲಿ, ನಮ್ಮ ವಿದ್ಯಾವಂತರಿಗೆ ಸರಕಾರೀ ಉದ್ಯೋಗಗಳಲ್ಲಿ, ನನ್ನಂಥವರಿಗೆ ಮಂತ್ರಿಮಂಡಲದಲ್ಲಿ ಸಾಕಷ್ಟು ಸ್ವಾನ ಕೊಡದೇ ಹೋದರೆ, ಆಮರಣ ಉಪವಾಸ ಮುಷ್ಕರ ನಾನು ಹೂಡೋದೇ ನಿಶ್ಚಯ!
'ನಿರೂಪಕ:
ಜಾತೀಯವಾದದ್ದು ಬಟ್ಟಬಯಲಿನ ಕುತ್ಸಿತ ಆಟ. ಮತೀಯ ಘಟಸರ್ಪವಾದರೋ ಗುಪ್ತಗಾಮಿನಿ. ರಾಷ್ಟ್ರ ವಿಭಜನೆಯ ಕಾಲದಲ್ಲಿ ಹಲವು ಲಕ್ಷ
————
೬೭