ಆಹ್ವಾನ
ನಿರೂಪಕ :
ಕೊಡ ಬಾಲ್ದಿಗಳ ಜಗಳದಲ್ಲಿ ನೀರು ಸುರಿದುಹೋಯ್ತು, ಹೆಂಗಸರ ಲೆಕ್ಕಾಚಾರ' ಅ೦ತೀರೇನು ? ಅವರನ್ನು ನಾಚಿಸಬಲ್ಲರು, ಗಂಡಸರು!
[ಕೆಳಗಿನ ಮಾತುಗಳು ಅಧಿಕಾರವಾಣಿಯಲ್ಲಿ]
ಒಬ್ಬ:
ನಮ್ಮ ರಾಜ್ಯದಲ್ಲಿ ಹುಟ್ಟಿ ನಿಮ್ಮಲ್ಲಿಗೆ ಹರಿಯೋ ಈ ನದಿಗೆ ಅಣೆಕಟ್ಟು ಕಟ್ಟೋದಕ್ಕೆ ನಿಮ್ಮ ರಾಜ್ಯಕ್ಕೆ ಹಕ್ಕಿಲ್ಲ! ಕೆಲಸ ನಿಲ್ಲಿಸಿ!
ಇನ್ನೊಬ್ಬ"':
ಈ ಜಲಾಶಯದ ನೀರಿನ ಹೆಚ್ಚು ಪಾಲು ಸಿಗಬೇಕು !
ಮತ್ತೊಬ್ಬ :
ನಮಗೆ ಸಲ್ಲಬೇಕಾದ ನೀರಿಗಾಗಿ ಹೋರಾಟ ಹೂಡೋದಕ್ಕೂ ನಾವು ಸಿದ್ಧ!
ನಿರೂಪಕ :
ಧೀರರು ! ಸಂಶಯವಿಲ್ಲ,ಬೇರೆ ಸಮಸ್ಯೆಗಳಿಲ್ಲದೇ ಹೋದಾಗ ನೀರಿಗೋಸ್ಕರವಾದರೂ ಹೋರಾಟ ಬೇಡವೇ? ಕೆಲಸವಿಲ್ಲದ ಬಡಗಿ ಅದನ್ನೇನೋ ಮಾಡಿದನಲ್ಲ-ಹಾಗೆ!.. ಜಾತಿ ಮುಖ್ಯ. ಅದಾದಮೇಲೆ ಮತ, ಮುಂದೆ ತಮ್ಮ ಪ್ರದೇಶ. ..ಮೊದಲು, ಹಿತ್ತಲಗೋಡೆಯೊಳಗೆ ನಮ್ಮ ರಾಜ್ಯ. ಬಳಿಕ,ನಮ್ಮ ಮನೆ ಇದ್ದ ರಸ್ತೆಯ ಮುಖಂಡತ್ವ .ಅದಾದಮೇಲೆ, ಮೊಹಲ್ಲಾದ ಧುರೀಣತ್ವ ! ಇಂಥ ಸಣ್ಣ ಮನಸ್ಸಿಗೆ, ಗಾದೆಯೂ ಒಂದು ಊರು ಗೋಲು : ಜಗಲಿ ಹಾರದವ ಗಗನ ಹಾರಿಯಾನೆ ? ಮಲೆನಾಡಿನವರು ನಾವು: ನಾವು ಬಯಲುಸೀಮೆಯವರು ; ನಮ್ಮದು ಕಣಿವೆ ಪ್ರದೇಶ: ಕಡಲುತೀರ ನಮ್ಮದು. ಅದಾದ ಬಳಿಕ, ದಕ್ಷಿಣದವರು-ಉತ್ತರದವರು!
ದಕ್ಷಿಣದವನು:
ಉತ್ತರದವರು ಅಹಂಕಾರಿಗಳು, ಸೋಮಾರಿಗಳು, ಹಿಂದೂಸ್ಥಾನವೆಂದರೆ ತಾವೇ ತಿಳಕೊಂಡಿದ್ದಾರೆ.ಬುದ್ದಿ ಕಲಿಸಬೇಕು ಅವರಿಗೆ !
————
೬೯