ವಿಷಯಕ್ಕೆ ಹೋಗು

ಪುಟ:AAHVANA.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಆಹ್ವಾನ

ರಾಷ್ಟ್ರದ ಬೃಹತ್ ಬದುಕೊಂದು ಮೈತಳೆದು ಹೊರಬರುವುದನ್ನು ಇತಿಹಾಸದ ಪ್ರೌಢ ವಿದ್ಯಾರ್ಥಿ ಕಾಣಬಲ್ಲ, ಅದು ಕಲಿಸುವ ವಿಶಿಷ್ಟ ಪಾಠವನ್ನು ತಿಳಿಯಬಲ್ಲ.

  • * * *

ಕಾವೇರಿ: -

[ಪ್ರೊಫೆಸರರ ಕೊಠಡಿಯ ಕದವನ್ನು ಮೆಲ್ಲನೆ ತಟ್ಟುತ್ತ] ಸರ್...... ಗಂಗಾಶರಣ್:

[ತುಸು ಗಟ್ಟಿಯಾಗಿ ಕದ ತಟ್ಟಿ] ಪ್ರೊಫೆಸರ್, ನಾವು ಒಳಗೆ ಬರಬಹುದೆ?

ಇತಿಹಾಸದ ಪ್ರೊಫೆಸರ್ : yes,ಬನ್ನಿ. [ನೂಕು ಮರೆಬಾಗಿಲು ತೆರೆದುಕೊಂಡು ಮುಚ್ಚಿದ ಕೀರಲು ಸದ್ದು]

ಕಾವೇರಿ : [ತುಸು ಅಳುಕುತ್ತ] ಸರ್...ತಮಗೆ ಬಿಡುವಿದ್ದರೆ.

ಪ್ರೊಫೆಸರ್ :

ಕೂತ್ಕೋಳ್ಳಿ ಮಿಸ್ ಕಾವೇರಿ ; ಕೂತ್ಕೋಳ್ಳಿ ಮಿಸ್ಟರ್ ಗಂಗಾಶರಣ್, [ಕೈ ಗಡಿಯಾರ ನೋಡಿ] ಇನ್ನರ್ಧ ಘಂಟೆ ಕಾಲ ನನಗೆ ಬಿಡುವಿದೆ.

ಕಾವೇರಿ : [ರಾಗವೆಳೆಯುತ್ತ] ಇವತ್ತು ತಮ್ಮ ತರಗತಿ ಆದ್ಮೇಲೆ ಮಿಸ್ಟರ್ ಗಂಗಾಶರಣರಿಗೂ ನನಗೂ ಸ್ವಲ್ಪ ವಿವಾದವಾಯ್ತು.

————

೭೭