ವಿಷಯಕ್ಕೆ ಹೋಗು

ಪುಟ:AAHVANA.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಹ್ವಾನ

ಪ್ರೊಫೆಸರ್ : [ನಗೆಯ ಧ್ವನಿಯಲ್ಲಿ] ಏನು ವಿಷಯ ?

ಗಂಗಾಶರಣ್ :

ನನ್ನ ಹುಟ್ಟು ಪ್ರದೇಶವಾದ ಉತ್ತರದವರು ಜಗಳಗಂಟರು, ಭಾರತದ ಅನೇಕ ಅಂತರ್ಯುದ್ಧಗಳು ಅಲ್ಲೇ ಆದುವು-ಅಂತ ಮಿಸ್ ಕಾವೇರಿ ಹೇಳಿದ್ರು.

ಪ್ರೊಫೆಸರ್ :

[ಛೇಡಿಸುವ ಕಂಠ] Fine ! ಮುಂದೆ?

ಕಾವೇರಿ :

ಅದಕ್ಕೆ ಗಂಗಾ ಶರಣ್ ಅಂದ್ರು, ಸರ್ – ಅಂತಃಕಲಹದಲ್ಲಿ ದಕ್ಷಿಣದ ನನ್ನ ವರಿಗೇ ಫಸ್ಟ್ ಪ್ರೈಜ್ ಅಂತ.'


ಪ್ರೊಫೆಸರ್ ಕಡೆಗೆ ?

ಗಂಗಾಶರಣ್ :

ಯಾರು ಸರಿ ಯಾರು ತಪ್ಪೂಂತ ತಮ್ಮ ನಿರ್ಣಯ ಕೇಳೋಕೆ ಬಂದ್ವಿ.

ಪ್ರೊಫೆಸರ್ :

ಹಂ!.. [ನಗೆಯ ಧ್ವನಿ ] ತೀರ್ಪು ಕೊಡ್ಲೇನು? ಇಬ್ಬರೂ ಸರಿ, ಇಬ್ಬರೂ ತಪ್ಪು?

'ಕಾವೇರಿ:

ಅಂದರೆ?'

ಗಂಗಾಶರಣ್:

ಹೇಗೆ?

———

೭೮