ಈ ಪುಟವನ್ನು ಪ್ರಕಟಿಸಲಾಗಿದೆ
ಆಹ್ವಾನ
ಚಂದ್ರಗುಪ್ತ :
ವಂಚನೆ! [ವ್ಯಥೆ ನಟಿಸುತ್ತ] ವಂಚಿತನಾಗಿರುವವನು ನಾನು ಮಹಾಪ್ರಭು,
ಅಲೆಗ್ಸಾಂಡರ್ : [ಆಶ್ಚರ್ಯದಿಂದ] ಏನು ? -
ಚಂದ್ರಗುಪ್ತ :
ಮಗಧ ಸಿಂಹಾಸನಕ್ಕೆ ನಾನು ಹಕ್ಕುದಾರ.
ಅಲೆಗ್ಸಾಂಡರ್ :
ಒಹೊಹೋ! . . . . . . . . . . . . ಹುಂ, ಸರಿ, ರಾಜಾ ಚಂದ್ರಗುಪ್ತ, [ಧನಿ ಏರಿಸಿ] ನಿಮ್ಮ ಮಾತೇನಾದರೂ ಸುಳ್ಳಾಯಿತು ಅಂದರೆ--
ಚಂದ್ರಗುಪ್ತ: ಈ ಶಿರಸ್ಸನ್ನು ಚೆಂಡಾಡುವಿರಂತೆ.
ಅಲೆಗ್ಸಾಂಡರ್ :
ಆಗಲಿ, ಮಗಧದ ಮೇಲೆ ಧಾಳಿ ನಡಸೋಣ.
ಪ್ರೊಫೆಸರ್ : -
ಆ ದಂಡಯಾತ್ರೆ ನೆರವೇರಲಿಲ್ಲ. ಹುಟ್ಟೂರಿಗಾಗಿ ಹಂಬಲಿಸಿದ ಗ್ರೀಕ್ ಸೈನಿಕರು, ಇನ್ನು ಸಾಕು-ಎಂದರು. ಅಲೆಗ್ಸಾಂಡರ್ ಸ್ವದೇಶಕ್ಕೆ ಅಭಿಮುಖವಾಗಿ ನಿರ್ಗಮಿಸಿದ. ಬೇಗನೆ ಮರಳಿ ಬರುತ್ತೇನೆ-ಎಂದಿರಬೇಕು ಚಂದ್ರ ಗುಪ್ತನಿಗೆ!
ಗಂಗಾಶರಣ್
ಆಗ ಆ ಗ್ರೀಕ್ ವೀರನಿಗಿನ್ನೂ ಮೂವತ್ತೆರಡು ವರ್ಷ ವಯಸ್ಸು.
ಕಾವೇರಿ :
ಎಷ್ಟು ಚಿಕ್ಕ ಪ್ರಾಯ!