ವಿಷಯಕ್ಕೆ ಹೋಗು

ಪುಟ:AAHVANA.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಹ್ವಾನ

ಪ್ರೊಫೆಸರ್ : ಹ್ಞ. [ಖಿನ್ನರಾಗಿ ಸಂಯುಕ್ತಾ-ಪೃಥ್ವಿರಾಜರ ಪ್ರಣಯ ಅದೆಂಥ ದುರಂತ ದಲ್ಲಿ ಮುಕ್ತಾಯವಾಯಿತು !

ಗಂಗಾಶರಣ್ : ಆ ಕಥೆ ನನಗೆ ಗೊತ್ತಿದೆ.

ಪ್ರೊಫೆಸರ್ :

ಹಲವು ಭಾವನೆಗಳನ್ನು ಕೆರಳಿಸುವ ಕಥೆ,

ಕಥನಕಾರ: [ನಿಧಾನವಾಗಿ]

ಕರುಳು ಕತ್ತರಿಸುವ ಕಥಾನಕ. ದಿಲ್ಲಿಯ ಪೃಥ್ವಿರಾಜ ಮತ್ತು ಕನೋಜದ ಜಯಚಂದ ದಾಯಾದಿಗಳು.ಜಯಚಂದನ ಮಹಾ ಸುಂದರಿ ಮಗಳು, ಸಂಯುಕ್ತಾ, ಆಕೆಯೂ ಪೃಥ್ವಿರಾಜನೂ ಪರಸ್ಪರ ಅನುರಕ್ತರು. ಆದರೇನು ? ತಾನು ದ್ವೇಷಿಸುವವನಿಗೆ ಜಯಚಂದ ಮಗಳನ್ನು ಕೊಡುವುದುಂಟೆ ? ಪೃಥ್ವಿ ರಾಜನಿಗೆ ಬುದ್ದಿ ಕಲಿಸಬೇಕೆಂದು ಜಯಚಂದ, ರಾಜಸೂಯ ಯಾಗವನ್ನೂ ಮಗಳ ಮದುವೆಯನ್ನೂ ಜತೆಯಾಗಿ ಏರ್ಪಡಿಸಿದ. ಯಾಗಕ್ಕೆ ಪೃಥ್ವಿ ರಾಜನು ಬಂದರೆ ಜಯಚಂದನ ಸಾರ್ವಭೌಮತ್ವವನ್ನು ಒಪ್ಪಿಕೊಂಡಂತೆ. ಆಮಂತ್ರಣವನ್ನು ದಿಲ್ಲೀಶ್ವರ ನಿರಾಕರಿಸಿದ.

ಯಾಗ ಮುಗಿಯಿತು. ಇನ್ನು ಸ್ವಯಂವರ. ಸರ್ವಾಲಂಕೃತ ವಧು, ಕೋಟೆಯ ಹೊರಗಡೆ ರಚಿತವಾಗಿದ್ದ ಮಹಾ ಮಂಟಪಕ್ಕೆ ಬಂದಳು. ಕೈಗಳಲ್ಲಿ ಹೂಮಾಲೆ ಹಿಡಿದು, ಅನೇಕ ರಾಜರನ್ನು ದಾಟಿಹೋದಳು. ತೀರಾ ಕೊನೆಯಲ್ಲಿ, ಪೃಥ್ವಿರಾಜನನ್ನು ಅವಮಾನಿಸಲೆಂದು ಜಯಚಂದ ನಿರ್ಮಿಸಿ ಇರಿಸಿದ್ದ ಪೃಥ್ವಿರಾಜನ ಪ್ರತಿಮೆಯೊಂದಿತ್ತು. ಸಂಯುಕ್ತಾ ಅದಕ್ಕೆ ಹಾರ ಹಾಕಿದಳು. ಸಭಾಮಂಟಪ ದಿಗ್ಭ್ರಮೆಗೊಂಡಂತೆ, * ಜಯ್ ! ಪೃಥ್ವಿ ರಾಜಕಿ ಜಯ್ !” ಘೋಷ ಕೇಳಿಸಿತು. ಮರೆಯಲ್ಲಿ ವೇಷ ಪಲ್ಲಟಿಸಿ ನಿಂತಿದ್ದ ವೀರರ ಗುಂಪೊಂದು ನಿಜ ವೇಷದಲ್ಲಿ ಹೊರಬಂತು. ಅವರ ನಾಯಕನಾಗಿದ್ದ

೮೯