ಆಹ್ವಾನ
ಕಾವೇರಿ: [ವಿಷಾದದಿಂದ] ಅಟ್ಟಮೇಲೆ ಒಲೆ ಉರಿಯಿತು.
ಗಂಗಾಶರಣ್ : [ತಾನೂ ವಿಷಾದದ ಧ್ವನಿಯಲ್ಲಿ] ಕೆಟ್ಟ ಮೇಲೆ ಬುದ್ದಿ ಬಂತು,
ಪ್ರೊಫೆಸರ್ ; ಯಾರಿಗೆ ? ಜಯಚಂದನೊಬ್ಬನಿಗೆ ತಾನೆ ? ಅವನಂತೂ ಸತ್ತೇ ಹೋದ. ಆದರೆ, ಎಂದೂ ಬುದ್ಧಿ ಕಲಿಯದ ದಡ್ಡರು ಇನ್ನೆಷ್ಟೋ ಜನ ಇದ್ದರೆನ್ನುವು ದಕ್ಕೆ ಮುಂದಿನ ಘಟನೆಗಳು ಸಾಕ್ಷಿ........[ನಿಟ್ಟುಸಿರು ಬಿಟ್ಟು] ಸರಿ. ಕ್ರಮೇಣ ಬಂಗಾಳ ಬಿಹಾರ್‌ಗಳ ಸ್ವತಂತ್ರ ರಾಜ್ಯಗಳು ಪರಾಧೀನವಾದುವು. ದಕ್ಷಿಣದ ದಂಡಯಾತ್ರೆಯನ್ನಾರಂಭಿಸಿದವನು ಅಲ್ಲಾವುದ್ದೀನ್ ಖಿಲ್ಜಿ. ಹದಿನಾಲ್ಕನೆಯ ಶತಮಾನದಲ್ಲಿ ಅವನ ಸೇನಾನಿ ಮಲ್ಲಿಕ್ ಕಾಫರ್, ಎಂದೂ ಒಂದಾಗಲು ಒಪ್ಪದಿದ್ದ ತೆಲಂಗಾಣದ ಕಾಕತೀಯರನ್ನು, ದೇವಗಿರಿಯ ಅರಸರನ್ನು, ದ್ವಾರಸಮುದ್ರದ ಹೊಯ್ಸಳರನ್ನು ಅನುಕ್ರಮವಾಗಿ ಸದೆಬಡಿದ.
ಕಾವೇರಿ : ಅಲ್ಲಿಂದ ಆತನ ಸೇನೆ ತಮಿಳು ನಾಡನ್ನು ಹೊಕ್ಕಿತು.
ಪ್ರೊಫೆಸರ್ : ಹೌದು, ಮಿಸ್ ಕಾವೇರಿ. ಆಗ ಮಧುರೆಯ ಪಾಂಡ್ಯರದೇ ಪ್ರಾಬಲ್ಯ. ಆದರೆ, ಆ ಪ್ರಬಲ ರಾಷ್ಟ್ರಕ್ಕೆ ಅವಸಾನ ಸನ್ನಿಹಿತವಾಗಿತ್ತು. ಅಂತಃಕಲಹವೇ ಕಾಹಿಲೆ. ಅಧಿಕಾರಕ್ಕಾಗಿ ಇಬ್ಬರು ಸೋದರರೊಳಗೆ ಕಚ್ಚಾಟ ನಡೆದಿತ್ತು. ವೀರ ಪಾಂಡ್ಯ ಹಾಗೂ ಸುಂದರ ಪಾಂಡ್ಯ, ಮಲ್ಲಿಕ್ ಕಾಫರ್ ವೀರಪಾಂಡ್ಯನಿಗೆ ಪಟ್ಟ ಕೊಡಿಸಿ ದಿಲ್ಲಿಗೆ ಅವನನ್ನು ಆಧೀನನ್ನಾಗಿ ಮಾಡಿದ.... -ಕಲುಬುರ್ಗಿ ಯಲ್ಲಿ ಬಹಮನಿ ರಾಜ್ಯವೊಂದು ತಲೆ ಎತ್ತಿತು. ಆದರೆ ಬೇಗನೆ ಐದು ಭಾಗಗಳಾಗಿ ಒಡೆಯಿತು.