ಆಹ್ವಾನ
ಗಂಗಾಶರಣ್ : ಶಿವಾಜಿಯ ಅನಂತರ
ಪ್ರೊಫೆಸರ್ : ಅವನಷ್ಟೇ ಸಾಮರ್ಥ್ಯದ ಅಂಥದೇ ವ್ಯಕ್ತಿತ್ವದ ಉತ್ತರಾಧಿಕಾರಿಗಳು ಪಟ್ಟ ವನ್ನೇರಲಿಲ್ಲವಾದರೂ ಮರಾಠಾ ಸಾಮ್ರಾಜ್ಯ ವಿಸ್ತಾರಗೊಂಡಿತು. ಔರಂಗ ಜೇಬನ ಮರಣಾನಂತರದ ಗೊಂದಲಮಯ ಪರಿಸ್ಥಿತಿಯಲ್ಲಿ ಪರ್ಸಿಯದ ನಾದಿರ್ ಷಾ ಬಂದು, ದಿಲ್ಲಿಯ ಮಯೂರ ಸಿಂಹಾಸನವನ್ನೇ ತನ್ನ ದೇಶಕ್ಕೆ ಒಯ್ದ ! ಮಿತ್ರರಾದ ಜತ್ತರು ಹಿಂತೆಗೆದ ಮೇಲೂ ಮರಾಠರು ಪೇಳ್ವೆ ಸದಾ ಶಿವರಾಯನ ನಾಯಕತ್ವದಲ್ಲಿ ದಿಲ್ಲಿಯನ್ನು ಆಕ್ರಮಿಸಿದರು,ಆದರೆ ಅಹ್ಮದ್‌ಷಾ ದುರಾನಿಯ ದಂಡಿನೊಡನೆ ಅನಂತರ ನಡೆದ ಪಾಣಿಪತ್ತಿನ ಯುದ್ಧದಲ್ಲಿ ಅವರಿಗೆ ಸೋಲಾಗಿ ದಿಲ್ಲಿ ಕೈ ಬಿಟ್ಟಿತು.......ಅದಕ್ಕೆ ಸ್ವಲ್ಪ ಮುನ್ನ ಈ ದೇಶದಲ್ಲಿದ್ದ ಇಟಾಲಿಯನ್ ವೈದ್ಯನೊಬ್ಬ ಏನು ಬರೆದಿದ್ದ ಗೊತ್ತೆ ?
ಗಂಗಾಶರಣ್ : ಡಾ. ಮಾನುಚ್ಚಿ,
ಪ್ರೊಫೆಸರ್ : ಹ್ಞ. “ಇಲ್ಲಿರುವುದನ್ನೆಲ್ಲಾ ಪೂರ್ತಿಯಾಗಿ ಝಾಡಿಸಿ ಇಡಿಯ ಸಾಮ್ರಾಜ್ಯ ವನ್ನೇ ಆಕ್ರಮಿಸಿಕೊಳ್ಳಲು ಮೂವತ್ತು ಸಾವಿರ ನಂಬುಗೆಯ ಐರೋಪ್ಯ ಸೈನಿಕರಿದ್ದರೆ ಸಾಕು.”........ಒಂದೇ ಸಲ ಅಲ್ಲದೇ ಹೋದರೂ ಕ್ರಮಕ್ರಮ ವಾಗಿ ಇಂಗ್ಲಿಷರು ಅದನ್ನು ಸಾಧಿಸಿದರು. ಪಾರ್ ಜಾಫರ್ ಎನ್ನುವ ಪದ ಕೇಳಿದ್ದೀರೇನು ?
ಕಾವೇರಿ : ದ್ರೋಹಕ್ಕೆ ಮನೆ ಮಾತು.
ಪ್ರೊಫೆಸರ್ : ಅವುಧದ ಸಿರಾಜುದ್ದೌಲನನ್ನು ಉರುಳಿಸಿ ತಾನೇ ಪಟ್ಟವೇರಬೇಕೆಂದು ಮಿರ್ಜಾಫರ್ ಆಶಿಸಿದ. ಕಲಕತ್ತೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ
೯೬