ವಿಷಯಕ್ಕೆ ಹೋಗು

ಪುಟ:AAHVANA.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಹ್ವಾನ


ಆಡಳಿತಗಾರನಾಗಿದ್ದ ಕ್ಲೈವನ ಜತೆ ಒಳಸಂಚು ನಡೆಯಿತು. ಪ್ಲಾಸಿಯಲ್ಲಿ ಯುದ್ಧವೇರ್ಪಟ್ಟು, ಸಿರಾಜುದ್ದೌಲನ ಪತನವಾಯಿತು.

ಕಾವೇರಿ : ದಕ್ಷಿಣದಲ್ಲಿ ಇಬ್ಬರು ವೀರರು ಬ್ರಿಟಿಷರ ವಿರುದ್ಧ ಎಡೆಬಿಡದೆ ಹೋರಾಡಿದರು.

ಪ್ರೊಫೆಸರ್ : ತಂದೆ ಮತ್ತು ಮಗ, ಹೈದರ್-ಟೀಪೋ, ಅವರು ನಡೆಸಿದ್ದು ಅಭಿಮಾನ ಪಡುವಂತಹ ಹೋರಾಟ, ಶ್ರೀರಂಗಪಟ್ಟಣದಲ್ಲಿ ಫ್ರೆಂಚ್ ಮಹಾಕ್ರಾಂತಿಯ ದಿನವನ್ನಾಚರಿಸಿ, ಸ್ವಾತಂತ್ರ್ಯ-ಸೌಹಾರ್ದ ಸಮಾನತೆಯ ಧ್ವಜಕ್ಕೆ ವಂದನೆ ಸಲ್ಲಿಸಿದವನು ಟೀಪೂ, ವೈಜ್ಞಾನಿಕ ಪ್ರಗತಿಯ ಬಗೆಗೆ ಅಪಾರ ಆಸಕ್ತಿ ವಹಿಸಿದವನು. ಬ್ರಿಟಿಷರ ವಿರುದ್ಧ ದೇಶದ ಇತರರನ್ನೆಲ್ಲ ಒಗ್ಗೂಡಿಸಲು ಅವನು ಬಹಳವಾಗಿ ಯತ್ನಿಸಿದ,

ಗಂಗಾಶರಣ್ : ಆದರೆ ಅವರಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸ್ವಾರ್ಥವೇ ಮುಖ್ಯವಾಗಿತ್ತು.

ಪ್ರೊಫೆಸರ್ : ಮರಾಠರೂ ನಿಜಾಮನೂ ಇಂಗ್ಲಿಷರಿಗೆ ನೆರವಾದರು.ಮೂವರ ಸೇನೆಗಳೂ ಶ್ರೀರಂಗಪಟ್ಟಣವನ್ನು ಮುತ್ತಿದುವು.

ಲಾವಣಿಕಾರ : ಅಜಬ್ ತಮಾಷ ಈಸ್ಟ್ ಇಂಡಿಯ ಕಂಪನಿ ಇಂಗ್ಲಿಷರ ನೆಲೆ ಆದೀತು ! ಸುತ್ತ ಕಾವೇರಿ ! ನಡುವೆ ಶ್ರೀರಂಗಪಟ್ಣ ಸುಲ್ತಾನ್ ದವಲತ್ತು ಹೋದೀತು !! ಹೆತ್ತಯ್ಯನೆಂದು ಪೂರ್ಣಯ್ಯನೋಳ್ | ಟೈಗರ್ ನಂಬಿಕೆ ಬಹು ಇತ್ತು | ಸುತ್ತ ಕಾವೇರಿ | ನಡುವೆ ಶ್ರೀರಂಗಪಟ್ಟ ಸುಲ್ತಾನ್ ದವಲತ್ತು ಹೋದೀತು || ಮಾಡಿದ‌ ಮೋಸ ! ಮರಾಟರಾಜ | ಹೈದರಾಬಾದ್ ನವಾಬರು ಒಂದಾಗಿ | ಕೊಡಗಿನರಾಜನು ಕೊಟ್ಟನು ದಾರಿಯ ಇಂಗ್ಲಿಷ್ ನವುಜಿಗೆ ಗುರಿಯಾಗಿ ||

೯೭