ಪುಟ:Aayurvedasaara Prathama Bhaaga.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


- 20 -

  • 11

ಎರಡನೇದು ಲೋಹಿತಾ (ರಕ್ತವರ್ಣ) ಎಂಬ ಹೆಸರಿನದು. ಇದು ಭತ್ತದ 16ನೇ 1 ಅಂಶದಷ್ಟು ದಪ್ಪವಾಗಿದ್ದು, ಎಳ್ಳು, ಮಚ್ಚೆ, ಬಂಗು, ಇವುಗಳಿಗೆ ಸ್ಥಾನ.

37. 3ನೇ ತೊಗ ತೃತೀಯಾ ಶ್ವೇತಾ ನಾಮ ದ್ವಾದಶಭಾಗಪ್ರಮಾಣಾ ಚರ್ಮ ಲಿನ ವಿವರಣ ದಲಾಜಗಲ್ಲೀಮಶಕಾಧಿಷ್ಠಾನಾ | (ಸು. 318.)

ಮೂರನೇದು ಶ್ವೇತಾ (ಬಿಳೇದು) ಎಂಬ ಹೆಸರಿನದು. ಇದು ಭತ್ತದ 12ನೇ 1 ಅಂಶ ದಷ್ಟು ದಪ್ಪವಾಗಿದ್ದು ಚರ್ಮದಲ, ಅಜಗಲ್ಲೀ, ಮಶಕ ಎಂಬ ಚರ್ಮವ್ಯಾಧಿಗಳಿಗೆ ಸ್ತಾನ ವಾಗಿರುತ್ತದೆ.

38: 4ನೇ ತೊಗ ಚತುರ್ಧೀ ತಾಮ್ರಾ ನಾಮಾಷ್ಟಭಾಗಪ್ರಮಾಣಾ ವಿವಿಧ - ಲಿನ ಎವರಣ ಕಿಲಾಸಕುಷ್ಠಾಧಿಷ್ಠಾನಾ | (ಸು. 318 )

ನಾಲ್ಕನೇದು ತಾಮ್ರಾ (ಕೆಂಪು) ಎಂಬ ಹೆಸರಿನದು. ಅದು ಭತ್ತದ 8ನೇ ಭಾಗದಷ್ಟು ದಪ್ಪ. ನಾನಾ ವಿಧದ ಬಿಳೇ ಕುಷ್ಠಗಳಿಗೆ ಸ್ಥಾನ.

39. 5ನೇ ತೊಗ ಪಂಚಮಿಾ ವೇದಿನೀ ನಾಮ ವ್ರೀಹಿಪಂಚಭಾಗಪ್ರಮಾಣಾ ಲಿನ ವಿವರಣ ಕುಷ್ಠವಿಸರ್ಪಾಧಿಷ್ಠಾನಾ | (ಸು. 318 )

ಐದನೇದು ವೇದಿನೀ ಎಂಬ ಹೆಸರಿನದು. ಅದು ಭತ್ತದ 5ನೇ 1 ಭಾಗದಷ್ಟು ದಪ್ಪವಾ ಗಿದ್ದು, ಕುಷ್ಠಕ್ಕೂ, ವಿಸರ್ಪಕ್ಕೂ ಸ್ದಾನವಾಗಿರುತ್ತದೆ.

40. 6ನೇ ತೊಗ ಷಷ್ಠೀ ರೋಹಿಣೀ ನಾಮ ವ್ರೀಹಿಪ್ರಮಾಣಾ ಗ್ರಂಧ್ಯ ಲಿನ ವಿವರಣ ಪಚ್ಯರ್ಬುದಶ್ಲೀಪದಗಲಗಂಡಾಧಿಷ್ಠಾನಾ | (ಸು. 318.)

ಆರನೇದು ರೋಹಿಣೀ ಎಂಬ ಹೆಸರಿನದು. ಅದು ಭತ್ತದಷ್ಟು ದಪ್ಪವಾಗಿದ್ದು, ಗ್ರಂಧಿ, ಅಪಚಿ, ಅರ್ಬುದ, ಶ್ಲೀಪದ, ಗಲಗಂಡ, ಇವುಗಳಿಗೆ ಸ್ಥಾನವಾಗಿರುತ್ತದೆ.

41. 7ನೇ ತೊಗ ಸಪ್ತಮಿಾ ಮಾಂಸಧರಾ ನಾಮ ವ್ರೀಹಿದ್ವಯಪ್ರಮಾಣಾ ಲಿನ ಎವರಣ ಭಗಂದರವಿದ್ರಧ್ಯರ್ಶೋಧಿಷ್ಠಾನಾ | (ಸು. 318 )

ಏಳನೇದು ಮಾಂಸಧರಾ ಎಂಬ ಹೆಸರುಳ್ಳದ್ದು. ಅದು 2 ಭತ್ತದಷ್ಟು ದಪ್ಪ. ಭಗಂದರ, ವಿದ್ರಧಿ, ಮೂಲವ್ಯಾಧಿ ಇವುಗಳಿಗೆ ಸ್ಥಾನ.

ಪರಾ ಇದಕ್ಕೆ ಸ್ಥೂಲಾ (ಅಂದರೆ ದಪ್ಪ) ಎಂಬ ಹೆಸರೂ ಅದೆ (ತಾ 14 )

42. ತೊಗಲುಗಳ ಯದೇತತ್ ಪ್ರಮಾಣಂ ನಿರ್ದಿಷ್ಟಂ ತನ್ಮಾಂಸಲೇಷ್ವವಕಾ ಪ್ರಮಾಣಗಳಿಗೆ ಅಪವಾದ ಶೇಷು ನ ಲಲಾಟೇ ಸೂಕ್ಷ್ಮಾಂಗುಲ್ಯಾದಿಷು || (ಸು. 318.)

ಮೇಲೆ ಹೇಳಿದ ಪ್ರಮಾಣವು ಮಾಂಸವುಳ್ಳ ಸ್ಥಳಗಳ ವಿಷಯದಲ್ಲಿ ಅಲ್ಲದೆ, ಹಣೆ, ಸಣ್ಣ ಬೆರಳು ಇತ್ಯಾದಿಗಳಿಗೆ ಲಗಾವಲ್ಲ.