ಪುಟ:Aayurvedasaara Prathama Bhaaga.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


೧ [1

- 22 -

ವೃಕ್ಷಾದ್ಯಧಾಭಿಪ್ರಹತಾತ್ ಕ್ಷೀರಿಣಃ ಕ್ಷೀರಮಾವಹೇತ್ | ಮಾಂಸಾ ದೇವಂ ಕ್ಷತಾತ್ ಕ್ಷಿಪ್ರಂ ಶೋಣಿತಂ ಸಂಪ್ರಸಿಚ್ಯತೇ || (ಸು. 319.)

ಹಾಲಿರುವ ಮರವನ್ನು ಕಡಿದಾಗ್ಗೆ ಹ್ಯಾಗೆ ಹಾಲು ಸುರಿಯುವದೋ, ಹಾಗೆ ಮಾಂಸ ವನ್ನು ಕಡಿದರೆ ಬೇಗನೇ ರಕ್ತವು ಹೊರಗೆ ಸ್ರವಿಸುವದು.

48.ಮೇದೋಧರಾ ಎಂಬ 3ನೇ ಕಲೆ ತೃತೀಯಾ ಮೇದೋಧರಾ ನಾಮ | ಮೇದೋ ಹಿ ಸರ್ವ ಭೂತಾನಾ ಮುದರಸ್ಥ ಮಣ್ವಸ್ಥಿಷು ಚ ಮಹತ್ಸು ಚ ಮಜ್ಜಾ ಭವತಿ |(ಸು. 319.) .

3ನೇದು ಮೇದೋಧರಾ (ಮೇದಸ್ಸನ್ನು ಧರಿಸುವಂಧಾದ್ದು) ಎಂಬ ಹೆಸರಿನದು. ಮೇದಸ್ಸು ಸರ್ವ ಜನರ ಹೊಟ್ಟೆಯಲ್ಲಿ ಮತ್ತು ಸೂಕ್ಷ್ಮ ಎಲುಬುಗಳಲ್ಲಿ ಇರುತ್ತದೆ. ದೊಡ್ಡ ಎಲುಬು ಗಳಲ್ಲಿ ಅದು ಮಜ್ಜೆಯಾಗುತ್ತದೆ.

49. ಸ್ದೂಲಾಸ್ಧಿಷು ವಿಶೇಷೇಣ ಮಜ್ಜಾತ್ವಭ್ಯಂತರಾಶ್ರಿತಃ | ಅಧೇತರೇಷು ಮಜ್ಜೆ ಮೇದ ಸರ್ವೇಷು ಸರಕ್ತಂ ಮೇದ ಉಚ್ಯತೇ || ಶುದ್ದ ಮಾಂಸಸ್ಯ ಯಃ ಸ್ನೇಹಃ ಸ್ಸು ಮತ್ತು ಸಾ ವಸಾ ಪರಿಕೀರ್ತಿತಾ | ವಸೆಗಳ ಭೇದ(ಸು. 319.)

ಮಜ್ಜೆಯು ವಿಶೇಷವಾಗಿ ದೊಡ್ಡ ಎಲುಬುಗಳ ಒಳಗಿನ ಎಡೆಗಳಲ್ಲಿ ಇರುತ್ತದೆ. ಇತರ ಎಲ್ಲಾ ಎಲುಬುಗಳಲ್ಲಿ ರಕ್ತಯುಕ್ತವಾಗಿರುವಂಧಾದ್ದು ಮೇದಸ್ಸು ಎಂತ ಕರೆಯಲ್ಪಡುತ್ತದೆ. ಬರೇ ಮಾಂಸದಲ್ಲಿರುವ ಪಸೆಯು ವಸೆಯೆಂತ ಪ್ರಸಿದ್ದವಾಗಿದೆ.

50. ಕಫಧರಾ ಎಂಬ ಚತುರ್ಧೀ ಶ್ಲೇಷ್ಮಧರಾ ನಾಮ | ಸರ್ವಸಂಧಿಷು ಪ್ರಾಣ 4 ನೇ ಕಲೆ ಭೃತಾಂ ಭವತಿ | (ಸು. 319.)

ನಾಲ್ಕನೇದು ಶ್ಲೇಷ್ಮೆಧರಾ (ಕಫಧಾರಿ) ಎಂಬ ಹೆಸರಿನದು. ಅದು ಪ್ರಾಣಿಗಳ ಸರ್ವ ಸಂದುಗಳಲ್ಲಿ ಇರುತ್ತದೆ.

ಪರಾ (ಯಕೃತ್ ಪ್ಲೀಹ್ನೋಶ್ಚತುರ್ಭಿಕಾ ಶಾ 13.) 4ನೇದು ಯಕೃತ್‌ ಪ್ಲೀಹಗಳ ಕಲೆ ಎಂತ ಶಾರ್ಙ್ಗಧರೆ ಯಲ್ಲಿ ಹೇಳಲ್ಪಟ್ಟದ್ದು ಸರಿ ಕಾಣುವದಿಲ್ಲ

51.ಕಫದ ಸ್ನೇಹಾಭ್ಯಕ್ತೇ ಯಧಾ ತ್ವಕ್ಷೇ ಚಕ್ರಂ ಸಾಧು ಪ್ರವರ್ತತೇ | ಪ್ರಯೋಜನ ಸಂಧಯಃ ಸಾಧುವರ್ತಂತೇ ಸಂಶ್ಲಿಷ್ಟಾಃ ಶ್ಲೇಷ್ಮಣಾ ತಧಾ ||(ಸು. 319)

ಅಚ್ಚು ಮರಕ್ಕೆ ಎಣ್ಣೆ ಮುಂತಾದ ಜಿಡ್ಡನ್ನು ಸವರುವದರಿಂದ ಚಕ್ರವು ಹ್ಯಾಗೆ ಚನ್ನಾಗಿ ತಿರುಗುತ್ತದೋ, ಹಾಗೆ ಸಂದುಗಳು ಕಫದಿಂದ ಕೂಡಿರುವದರಿಂದ ಒಳ್ಳೇದಾಗಿ ತಿರುಗುತ್ತವೆ.