ಪುಟ:Aayurvedasaara Prathama Bhaaga.djvu/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


                 - 37 -
                                  ಅ 11

ಪ್ರದುಷ್ಟಾನಾಂ ಹಿ ದೋಷಾಣಾಮುಚ್ಚಿ ತಾನಾಂ ಪ್ರಧಾವತಾಂ | ಧ್ರುವಮುನ್ಮಾರ್ಗಗಮನಮತಃ ಸರ್ವವಹಾಃ ಸ್ಮೃತಾಃ || (ಸು. 347.)

ದೋಷಗಳು ಕೆಟ್ಟು, ಕೂಡಿಕೊಂಡು ಓಡುವಾಗ ಸಿರೆಯೊಳಗಣ ಗತಿಯು ಕ್ರಮ ಬಿಟ್ಟು ಹೋಗುವದು ನಿಶ್ಚಯ. ಆದ್ದರಿಂದ ಸಿರೆಗಳು ಸರ್ವವಹಾಗಳೆನ್ನಿಸಿಕೊಂಡವೆ.

88. ತತ್ರಾರುಣಾ ವಾತವಹಾಃ ಸೂರ್ಯಂತೇ ವಾಯುನಾ ಸಿರಾಃ | ಸಿರೆಗಳ ಪಿತ್ತಾದುಷ್ಣಾಶ್ಚ ನೀಲಾಶ್ಚ ಶೀತಾ ಗೌರ್ಯ‌ಃ ಸ್ಥಿರಾಃ ಕಫಾತ್ || ಭೇದಗಳು ಅ‌ಸೃಗ್ವಹಾಸ್ತು ರೋಹಿಣ್ಯ‌ಃ ಸಿರಾ ನಾತ್ಯುಷ್ಣ ಶೀತಲಾಃ |

                              (ಸು. 347.)
ವಾತವಾಹಿ ಸಿರೆಗಳು ಕೆಂಪು ಒತ್ತಿದ ಕಪ್ಪು ವರ್ಣವಾಗಿದ್ದು ವಾಯುವಿನಿಂದ ತುಂಬಿರುತ್ತವೆ. 

ಸಿರೆಗಳು ಪಿತ್ತದ ದೆಸೆಯಿಂದ ನೀಲವರ್ಣವಾಗಿಯೂ, ಬಿಸಿಯಾಗಿಯೂ, ಇರುವವು, ಮುತ್ತು ಕಫದ ದೆಸೆಯಿಂದ ಶೀತವಾಗಿಯೂ, ಬಿಳೇದಾಗಿಯೂ, ಸ್ಥಿರವಾಗಿಯೂ ಇರುವವು. ರಕ್ತವಾಹಿ ಸಿರಗಳು ಅತ್ಯುಷ್ಣತೆಯಾಗಲಿ ಅತಿಶೀತತೆಯಾಗಲಿ ಇಲ್ಲದೆ ಕೆಂಪಾಗಿ ಇರುವವು.

89. ಸಿರೆಗಳು ವ್ಯಾಪ್ನುವಂತ್ಯಭಿತೋ ದೇಹಂ ನಾಭಿತಃ ಪ್ರಸೃತಾಃ ಸಿರಾಃ | ಸರ್ವಾಂಗ ಪ್ರತಾನಾ‌ಃ ಪದ್ಮಿನೀಕಂದಾದ್ಬಿ ಸಾದೀನಾಂ ಯಧಾ ಜಲಂ ||

ವ್ಯಾಪಿಗಳು  (ಸು. 349.)
ತಾವರೆಗಡ್ಡೆಯಿಂದ ಹೊರಟ ಮೃಣಾಲಾದಿಗಳ ಹಂಬುಗಳು ಹ್ಯಾಗೆ ನೀರನ್ನು ವ್ಯಾಪಿ ಸುತ್ತವೋ, ಹಾಗೆಯೇ ಹೊಕ್ಕುಳಿಂದ ಹೊರಟ ಸಿರೆಗಳು ದೇಹವನ್ನು ಎಲ್ಲಾ ಕಡೆಗಳಲ್ಲಿಯೂ ವ್ಯಾಪಿಸುತ್ತವೆ.

90. ದಶ ಮೂಲಸಿರಾ ಹೃತ್ ಸ್ಧಾಸ್ತಾ‌ಃ ಸರ್ವಂ ಸರ್ವತೋ ವಪುಃ | ರಸಾ ಹೃದಯದ ತ್ಮಕಂ ವಹಂತ್ಯೋಜಸ್ತನ್ನಿಬದ್ಧ‌ಂ ಹಿ ಚೇಷ್ಟಿತಂ || ಸ್ಥೂಲಮೂಲಾ‌ಃ ಹತ್ತು ಮೂಲ ಸುಸೂಕ್ಷ್ಮಾಗ್ರಾ‌ಃ ಪತ್ರರೇಖಾಪ್ರತಾನವತ್ | ಭಿದ್ಯಂತೇ ತಾಸ್ತತಃ ಸಪ್ತಶತಾನ್ಯಾಸಾಂ ಭವಂತಿ ತು || (ವಾ. 153 )

ಮೂಲಸಿರಾನಾಳಗಳು 10. ಇವು ಹೃದಯದಲ್ಲಿದ್ದು ರಸಾತ್ಮಕವಾದ ಓಜಸ್ಸನ್ನು (ರಕ್ತ ವನ್ನು) ಇಡೀ ಶರೀರಕ್ಕೆ ಸರ್ವಕಡೆಗಳಲ್ಲಿಯೂ ಪ್ರಾಪಿಸುತ್ತವೆ. ಮನುಷ್ಯರ ಚೇಷ್ಟೆಗಳು (ವಾಕ್ಕಾಯಮನೋವ್ಯಾಪಾರಗಳು) ಅದನ್ನು ಹೊಂದಿರುತ್ತವೆ. ಬುಡ ತೋರವಾಗಿಯೂ ಕೊನೆ ಬಹು ಸೂಕ್ಷ್ಮವಾಗಿಯೂ ಎಲೆಯೊಳಗಣ ರೇಖೆಗಳ ಹಬ್ಬಿನಂತೆ, ಭಿನ್ನವಾಗುತ್ತವೆ. ಹಾಗೆ ಅವುಗಳು ಒಟ್ಟು 700 ಆಗುತ್ತವೆ.

91. ಸಿರಾಧಮಸಿ ಸಿರಾಧಮನ್ಯೋ ನಾಭಿಸ್ಥಾಃ ಸರ್ವ‌ಂ ವ್ಯಾಪ್ಯ ಸ್ಧಿತಾಸ್ತ ಗಳ ಸಾಮಾ ನುಂ | ಪುಷ್ಣಂತಿ ಚಾನಿಶಂ ವಾಯೋಃ ಸಂಯೋಗಾತ್ಸರ್ವ ಗಳ ಸಾಮಾ ನ್ಯ ಕೆಲಸ ಧಾತುಭಿಃ (ಶಾ.)