ಪುಟ:Aayurvedasaara Prathama Bhaaga.djvu/೧೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


- 43 - ಆ !! ಉತ್ಕ್ಷೇಪಗಳೆಂಬವು 2, ಸ್ಥಪನೀ 1, ಈ ಮೂರು ಮರ್ಮಗಳಿಗೆ ಹೊಕ್ಕ ಶಲ್ಯವನ್ನು ತೆಗೆ ದೊಡನೆ ಮರಣಪ್ರಾಪ್ತ ‌ವಾಗುವದಾಗಿ ತಿಳಿಯತಕ್ಕದ್ದು.

107. ಲೋಹಿತಾಕ್ಷಾಣಿ ಜಾನೂರ್ವೀ ಕೂರ್ಚಾ ವಿಟಪ ಕೂರ್ಪರಾಃ | ಕುಕುಂದರೇ ಕಕ್ಷಧರೇ ವಿಧುರೇ ಸಕೃಕಾಟಿಕೇ || ವೈಕಲ್ಯಕರ ಅಂಸಾಂಸಫಲಕಾಪಾಂಗಾ ನೀಲೇ ಮನ್ಯೇ ಫಣೌ ತಧಾ | ವೈಕಲ್ಯಕರಣಾನ್ಯಾಹುರಾವರ್ತೌ ದ್ವೌ ತಥೈವ ಚ || (ಸು. 358.) ಲೋಹಿತಾಕ್ಷ (4), ಆಣಿ (4), ಜಾನು (2), ಉರ್ವೀ (4), ಕೂರ್ಚ (4), ಎಟಪ (2), ಕೂರ್ಪರ (2), ಕುಕುಂದರ (2), ಕಕ್ಷಧರ (2), ವಿಧುರ (2), ಕೃಕಾಟಿಕಾ (2), ಅಂಸ (2), ಅಂಸಫಲಕ (2), ಅಪಾಂಗ (2), ನೀಲ (2), ಮನ್ಯ (2), ಫಣ (2), ಆವರ್ತ (2),ಈ ಹೆಸರಿನ ಮರ್ಮಗಳು (44) ಅಂಗವೈರೂಪ್ಯ ಉಂಟುಮಾಡುವಂಧವು.

108. ರೋಗಕಾರಕ ಗುಲ್ಫೌದ್ವೌ ಮಣಿಬಂಧೌ ದ್ವೌ ದ್ವೇ ದ್ವೀ ಕೂರ್ಚಶಿರಾಂಸಿ ಚ | ಮರ್ಮಗಳು ರುಚಾಕರಾಣಿ ಚಾನೀಯಾದಷ್ಟಾವೇತಾನಿ ಬುದ್ದಿ ಮಾನ್ || (ಸು. 338.)

ಗುಲ್ಘಗಳೆರಡು, ಮಣಿಬಂಧಗಳೆರಡು, ಹಸ್ತ ಪಾದಗಳಲ್ಲಿರುವ ಕೂರ್ಚಶಿರಸ್ಸುಗಳು ನಾಲ್ಕು, ಹೀಗೆ 8 ಮರ್ಮಗಳು ರೋಗವನ್ನುಂಟುಮಾಡತಕ್ಕವು.

ಕ್ಷಿಪ್ರಾಣಿ ವಿದ್ದ ಮಾತ್ರಾಣಿ ಘ್ನಂತಿ ಕಾಲಾಂತರೇಣ ಚ | (ಸು 338 ) ಚುಚ್ಚಿದ ಮಾತ್ರದಿಂದ ಕ್ಷಿಪ್ರಗಳು ಸಹ ಕಾಲಾಂತರದಿಂದ ಕೊಲ್ಲುತ್ತವೆ.

109. ಚತುರ್ವಿಧಾ ಯಾಸ್ತು ಸಿರಾಃ ಶರೀರೇ ಪ್ರಾಯೋಣ ತಾ ಮರ್ಮಸು ಸನ್ನಿ ವಿಷ್ಟಾಃ | ಸ್ನಾಯ್ವಸ್ಥಿಮಾಂಸಾನಿ ತಧೈವ ಸಂಧೀನ್ ಸಂತರ್ಪ್ಯ ದೇಹಂ ಪ್ರತಿಪಾಲಯಂತಿ || (ಸು. 339.)

ಶರೀರದಲ್ಲಿ ವಾತಾದಿ ನಾಲ್ಕು ವಿಧವಾಗಿ ಇರುವ ಸಿರಾನಾಳಗಳು ಹೆಚ್ಚಾಗಿ ಮರ್ಮ ಗಳಲ್ಲಿ ಕೂಡಿರುತ್ತವೆ. ಅವು, ನರ, ಎಲುಬು, ಮಾಂಸಖಂಡ, ಮತ್ತು ಸಂದುಗಳನ್ನು ತೃಪ್ತಿ ಪಡಿಸಿ, ದೇಹವನ್ನು ಕಾಪಾಡುತ್ತವೆ.

110. ಮರ್ಮಗಳ ಸಮೀಪದ ಚುಚ್ಚಿದರೆ ಫಲಗಳು. ತತ್ರ ಸದ್ಯಃ ಪ್ರಾಣಹರಮಂತೇ ವಿದ್ಧಂ ಕಾಲಾಂತರೇಣ ಮಾರಯತಿ | ಕಾಲಾಂತರಪ್ರಾಣಹರಮಂತೇ ವಿದ್ಧಂ

ವೈಕಲ್ಯ ಮಾಪಾದಯತಿ | ವಿಶಲ್ಯಪ್ರಾಣಹರಮಂತೇ ವಿದ್ದಂ ಕಾಲಾಂತರೇಣ ಕ್ಲೇಶಯತಿ ರು

ಜಾಂ ಚ ಕರೋತಿ | ರುಜಾಕರಮತೀವ್ರವೇದನಂ ಭವತಿ | (ಸು. 340.)